![]() ಸೇವ್ ಪೂರಿ | |
ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಮಹಾರಾಷ್ಟ್ರ |
ವಿವರಗಳು | |
ಮುಖ್ಯ ಘಟಕಾಂಶ(ಗಳು) | ಪೂರಿ, ಸೇವ್, ಆಲೂಗಡ್ಡೆ, ಈರುಳ್ಳಿ, ಚಟ್ನಿಗಳು |
ಪ್ರಭೇದಗಳು | ಭೇಲ್ ಪುರಿ, ದಹಿ ಪೂರಿ, ಪಾನಿ ಪೂರಿ, ಸೇವ್ ಪಾಪ್ಡಿ ಚಾಟ್ |
ಸೇವ್ ಪೂರಿ ಒಂದು ಭಾರತೀಯ ತಿಂಡಿ ಮತ್ತು ಒಂದು ಬಗೆಯ ಚಾಟ್ ಆಗಿದೆ.[೧] ಇದು ಮುಂಬಯಿ, ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡ ಒಂದು ವಿಶೇಷತೆ.[೨] ಮುಂಬಯಿ ಮತ್ತು ಪುಣೆಯಲ್ಲಿ, ಸೇವ್ ಪೂರಿಯನ್ನು ಬೀದಿ ಆಹಾರದೊಂದಿಗೆ ಬಲವಾಗಿ ಸಂಬಂಧಿಸಲಾಗುತ್ತದೆ, ಆದರೆ ಇದನ್ನು ದುಬಾರಿ ಸ್ಥಳಗಳಲ್ಲೂ ಬಡಿಸಲಾಗುತ್ತದೆ.[೧] ಇತ್ತೀಚೆಗೆ, ಸೂಪರ್‍ಮಾರ್ಕೆಟ್‍ಗಳು ಸೇವ್ ಪೂರಿ ಮತ್ತು ಭೇಲ್ ಪುರಿಯಂತಹ ಹೋಲುವ ಖಾದ್ಯಗಳ ಸಿದ್ಧ ಆಹಾರ ಪ್ಯಾಕೆಟ್‍ಗಳನ್ನು ದಾಸ್ತಾನು ಮಾಡುವುದನ್ನು ಆರಂಭಿಸಿವೆ.[೩]
ಸೇವ್ ಪೂರಿಗೆ ಯಾವುದೇ ನಿಶ್ಚಿತ ಪಾಕವಿಧಿ ಇಲ್ಲವಾದರೂ, ವ್ಯಾಪಕವಾಗಿ ಬಳಸಲಾದ ಮೂಲ ಘಟಕಾಂಶಗಳು ಸಮಾನವಾಗಿರುತ್ತವೆ. ಸೇವ್ ಪೂರಿಯನ್ನು ಮೂಲಭೂತವಾಗಿ ಪೂರಿಯಿಂದ ತಯಾರಿಸಲಾಗುತ್ತದೆ. ಪೂರಿಯಲ್ಲಿ ಚೌಕವಾಗಿ ಕತ್ತರಿಸಿದ ಆಲೂಗಡ್ಡೆ ಚೂರುಗಳು, ಈರುಳ್ಳಿ, ಮೂರು ರೀತಿಯ ಚಟ್ನಿಗಳು: ಹುಣಸೆ, ಖಾರ ಮತ್ತು ಬೆಳ್ಳುಳ್ಳಿ ತುಂಬಿಸಲಾಗುತ್ತದೆ ಮತ್ತು ಮೇಲೆ ಸೇವ್‍ನ್ನು ಧಾರಾಳವಾಗಿ ಸಿಂಪಡಿಸಲಾಗುತ್ತದೆ. ಮಾವಿನಕಾಯಿಯ ಋತು ಬಂದಾಗ, ಮಾವಿನಕಾಯಿಯಿಂದ ಅಥವಾ ಸ್ವಲ್ಪ ನಿಂಬೆರಸ ಮತ್ತು ಚಾಟ್ ಮಸಾಲಾದಿಂದ ರುಚಿಗೊಳಿಸಲಾಗುತ್ತದೆ.[೪]
ಸೇವ್ ಪೂರಿಯನ್ನು ವಿವಿಧ ಹೂರಣಗಳು ಮತ್ತು ಅಲಂಕಾರಿಕ ಪದಾರ್ಥಗಳಿಂದ ತಯಾರಿಸಬಹುದು. ಕೆಲವು ಜನಪ್ರಿಯ ರೂಪಗಳೆಂದರೆ ದಹಿ ಸೇವ್ ಬಟಾಟಾ ಪೂರಿ[೫] (ಮೊಸರು ಮತ್ತು ಆಲೂಗಡ್ಡೆಯಿರುವ ಸೇವ್ ಪೂರಿ), ಪಾಲಕ್ ಸೇವ್ ಪೂರಿ (ಪಾಲಕ್‍ನೊಂದಿಗೆ ಸೇವ್ ಪೂರಿ) ಮತ್ತು ಮೆಕ್ಕೆ ಜೋಳ ಸೇವ್ ಪೂರಿ. ಕೆಲವು ವೇಳೆ ಅದರ ತಯಾರಿಕೆಯಲ್ಲಿ ಪುದೀನಾ ಚಟ್ನಿ ಮತ್ತು ಪನೀರ್‍ನ್ನೂ ಸೇರಿಸಲಾಗುತ್ತದೆ.[೬]
{{cite news}}
: Italic or bold markup not allowed in: |newspaper=
(help)
{{cite news}}
: Italic or bold markup not allowed in: |newspaper=
(help); More than one of |archivedate=
and |archive-date=
specified (help); More than one of |archiveurl=
and |archive-url=
specified (help)