ಸೋನ್‍ಚಿಡಿಯಾ | |
---|---|
ನಿರ್ದೇಶನ | ಅಭಿಶೇಕ್ ಚೌಬೆ |
ನಿರ್ಮಾಪಕ | ರಾನಿ ಸ್ಕ್ರ್ಯೂವಾಲಾ |
ಲೇಖಕ | ಅಭಿಶೇಕ್ ಚೌಬೆ ಸುದೀಪ್ ಶರ್ಮಾ |
ಪಾತ್ರವರ್ಗ | ಸುಶಾಂತ್ ಸಿಂಗ್ ರಾಜ್‍ಪೂತ್ ಭೂಮಿ ಪೇಡ್ನೇಕರ್ ಮನೋಜ್ ಬಾಜಪೇಯಿ ರಣ್‍ವೀರ್ ಶೋರಿ ಆಷುತೋಶ್ ರಾಣಾ |
ಸಂಗೀತ | ವಿಶಾಲ್ ಭಾರದ್ವಾಜ್ |
ಛಾಯಾಗ್ರಹಣ | ಅನುಜ್ ರಾಕೇಶ್ ಧವನ್ |
ಸಂಕಲನ | ಮೇಘನಾ ಸೇನ್ |
ಸ್ಟುಡಿಯೋ | ಆರ್ಎಸ್ವಿಪಿ ಮೂವೀಸ್ |
ವಿತರಕರು | ಆರ್ಎಸ್ವಿಪಿ ಮೂವೀಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧". |
ಅವಧಿ | 143 ನಿಮಿಷಗಳು[೩] |
ದೇಶ | ಭಾರತ |
ಭಾಷೆ | ಹಿಂದಿ ಬುಂದೇಲಿ |
ಸೋನ್‍ಚಿಡಿಯಾ (ಅನುವಾದ: ಚಿನ್ನದ ಹಕ್ಕಿ) ೨೦೧೯ರ ಒಂದು ಹಿಂದಿ ಸಾಹಸಪ್ರಧಾನ ಚಲನಚಿತ್ರವಾಗಿದೆ.[೪][೫][೬] ಅಭಿಷೇಕ್ ಚೌಬೆ ಇದರ ನಿರ್ದೇಶಕರು ಮತ್ತು ಸಹಬರಹಗಾರರಾಗಿದ್ದಾರೆ. ಈ ಚಿತ್ರದಲ್ಲಿ ಸುಶಾಂತ್ ಸಿಂಗ್ ರಾಜ್‍ಪೂತ್, ಭೂಮಿ ಪೇಡ್ನೇಕರ್, ಮನೋಜ್ ಬಾಜಪೇಯಿ, ರಣ್‍ವೀರ್ ಶೋರಿ, ಆಷುತೋಶ್ ರಾಣಾ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಚಂಬಲ್‍ನಲ್ಲಿ ಹಿನ್ನೆಲೆ ಹೊಂದಿರುವ ಒಂದು ಕಥೆಯನ್ನು ಪ್ರಸ್ತುತಪಡಿಸುತ್ತದೆ.[೭][೮] ಚಿತ್ರವನ್ನು ೧ ಮಾರ್ಚ್ ೨೦೧೯ರಂದು ಬಿಡುಗಡೆ ಮಾಡಲಾಯಿತು. ಚಿತ್ರವು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಇದರ ಸಂಭಾಷಣೆಗಳು ಸಂಪೂರ್ಣವಾಗಿ ಬುಂದೇಲಿ ಉಪಭಾಷೆಯಲ್ಲಿವೆ.
ಚಿತ್ರದ ಕಥೆಯು ಚಂಬಲ್ ನದಿಯ ಕಣಿವೆಯ ಕಮರಿಗಳಲ್ಲಿ ಹಿನ್ನೆಲೆ ಹೊಂದಿದೆ. ಇದು ೧೯೭೫ರಲ್ಲಿದ್ದ ಡಕಾಯಿತರ ಕಥೆಯನ್ನು ಹೇಳುತ್ತದೆ. ಇವರು ತಮ್ಮನ್ನು ತಾವು ಬಾಘಿಗಳು ಅಥವಾ ಬಂಡಾಯಗಾರರು ಎಂದು ಕರೆದುಕೊಂಡರು.
ಟನ್ನುಗಟ್ಟಲೆ ಚಿನ್ನ ಮತ್ತು ನಗದು ಇರುವ ವರದಕ್ಷಿಣೆಯನ್ನು ವಧುವಿಗೆ ಅವಳ ತಂದೆಯು ನೀಡುವನು ಹಾಗಾಗಿ ಡಕಾಯಿತ ಮಾನ್ ಸಿಂಗ್ (ಮನೋಜ್ ಬಾಜಪೇಯಿ) ಉರುಫ್ 'ದದ್ದಾ' ಲೂಟಿ ಮಾಡಬೇಕೆಂಬ ಮಾಹಿತಿಯನ್ನು ಲಚ್ಛು ಬಾಘಿಗಳಿಗೆ ನೀಡುತ್ತಾನೆ. ಲೂಟಿಯ ವೇಳೆ ವೀರೇಂದ್ರ ಸಿಂಗ್ ಗುಜ್ಜರ್ (ಆಷುತೋಶ್ ರಾಣಾ) ನೇತೃತ್ವದಲ್ಲಿ ವಿಶೇಷ ಕಾರ್ಯಪಡೆಯು (ಎಸ್‍ಟಿಎಫ಼್) ಅವರ ಮೇಲೆ ದಾಳಿ ಮಾಡಿದಾಗ ದದ್ದಾ ಕೊಲ್ಲಲ್ಪಡುತ್ತಾನೆ. ಇದು ಅವರ ಗುಂಪಿನಲ್ಲಿ ಸೀಳಾಗುವುದಕ್ಕೆ ಕಾರಣವಾಗುತ್ತದೆ. ಲಖನಾ (ಸುಶಾಂತ್ ಸಿಂಗ್ ರಾಜ್‍ಪೂತ್) ಪೋಲಿಸರಿಗೆ ಶರಣಾಗಲು ಬಯಸುತ್ತಾನೆ. ಆದರೆ ವಕೀಲ್ ಸಿಂಗ್ ಬಾಘಿಯ ಧರ್ಮವಾದ ಬಂಡಾಯವನ್ನು ಅನುಸರಿಸಲು ಬಯಸುತ್ತಾನೆ.
ಪಲಾಯನ ಮಾಡುತ್ತಿರುವಾಗ ಅವರು ಠಾಕುರ್‌ನ ಹೆಂಡತಿ ಇಂದುಮತಿ ತೋಮರ್ (ಭೂಮಿ ಪೇಡ್ನೇಕರ್) ಜೊತೆಗೆ ಸೋನ್‍ಚಿಡಿಯಾ ಉರುಫ್ 'ಲಲ್ಲಿ' ಎಂಬ ಹೆಸರಿನ ಹುಡುಗಿಯನ್ನು ಭೇಟಿಯಾಗುತ್ತಾರೆ. ಅವಳ ಮೇಲೆ ಇಂದುಮತಿಯ ಕುಟುಂಬದ ಮುಖ್ಯಸ್ಥನು ಅತ್ಯಾಚಾರ ಮಾಡಿರುತ್ತಾನೆ. ಸೋನ್‍ಚಿಡಿಯಾಳನ್ನು ಕಾಪಾಡಲು ಇಂದುಮತಿ ಅವನನ್ನು ಸಾಯಿಸಿ ಅವಳನ್ನು ಪಾರುಮಾಡಿ ಆಸ್ಪತ್ರೆಗೆ ಕರೆದೊಯ್ಯಲು ಓಡಿಬಂದಿರುತ್ತಾಳೆ. ಅವಳನ್ನು ಸಾಯಿಸಲು ಇಂದುಮತಿಯ ಇಡೀ ಕುಟುಂಬವು ಅವಳನ್ನು ಬೆನ್ನಟ್ಟಿ ಬರುತ್ತಿರುತ್ತದೆ. ಸೋನ್‍ಚಿಡಿಯಾಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಬೇಕೆಂದು ಅವಳು ಬಾಘಿಗಳನ್ನು ಬೇಡಿಕೊಳ್ಳುತ್ತಾಳೆ. ಬಾಘಿಗಳು ಒಪ್ಪುತ್ತಾರೆ.
ಇಂದುಮತಿಯ ಕುಟುಂಬವು ಆಗಮಿಸಿ ತಮ್ಮೊಂದಿಗೆ ಖುಶಿಯಲ್ಲಿ ಕರೆದೊಯ್ಯಲು ಪ್ರಯತ್ನಿಸುತ್ತದೆ. ವಕೀಲ್ ಸಿಂಗ್ ಅವಳನ್ನು ಹೋಗಲು ಬಿಡಲು ಒಪ್ಪುತ್ತಾನಾದರೂ, ಲಖ್ನಾ ಪ್ರತಿಭಟಿಸಿ ಅದಕ್ಕೆ ಒಪ್ಪುವುದಿಲ್ಲ. ಈ ಗಲಿಬಿಲಿಯಲ್ಲಿ, ಇಂದುಮತಿಯ ಸ್ವಂತ ಮಗನು ವಕೀಲ್‍ನ ಸೋದರನ ಮೇಲೆ ಗುಂಡು ಹಾರಿಸಿ ಆಕಸ್ಮಿಕವಾಗಿ ಅವನನ್ನು ಕೊಲ್ಲುತ್ತಾನೆ. ಲಖ್ನಾ ಮತ್ತು ತಂಡ, ಜೊತೆಗೆ ಇಂದುಮತಿ ಮತ್ತು ಸೋನ್‍ಚಿಡಿಯಾ ತಪ್ಪಿಸಿಕೊಳ್ಳುತ್ತಾರೆ. ವಕೀಲ್ ಸಿಂಗ್ ಅವರನ್ನು ಬೆನ್ನಟ್ಟಿ ಸಾಯಿಸುವ ಶಪಥ ಮಾಡುತ್ತಾನೆ. ಅದು ಅವರನ್ನು ಕೊಲ್ಲಲು ಮಾಡಿದ್ದ ಕುತಂತ್ರವೆಂದು ತಿಳಿದಿದ್ದೂ ಲಚ್ಛುನ ತಂದೆಯನ್ನು ಇನ್‍ಸ್ಪೆಕ್ಟರ್ ಗುಜ್ಜರ್‌ನಿಂದ ಕಾಪಾಡಲು ಮಾನ್ ಸಿಂಗ್ ವರದಕ್ಷಿಣೆಯ ಮನೆಯನ್ನು ಲೂಟಿ ಮಾಡಿದನು ಎಂದು ಬಹಿರಂಗವಾಗುತ್ತದೆ. ಗುಜ್ಜರ್ ಅವನನ್ನು ಒತ್ತೆಯಾಳಾಗಿ ಮಾಡಿ, ಲಚ್ಛು ಬಾಘಿಗಳನ್ನು ಆ ಹಳ್ಳಿಗೆ ಕರೆತಂದರೆ ಮಾತ್ರ ಅವನನ್ನು ಬಿಡುವುದಾಗಿ ಮಾತುಕೊಟ್ಟಿರುತ್ತಾನೆ ಮತ್ತು ಆಗ ಪೋಲಿಸರು ಎಲ್ಲ ಭಾಘಿಗಳನ್ನು ಒಮ್ಮೆಲೆ ಕೊಂದು ಸರ್ಕಾರದಿಂದ ಬಹುಮಾನ ಪಡೆಯುವ ಯೋಜನೆಯಿರುತ್ತದೆ.
ಆಸ್ಪತ್ರೆ ದಾರಿ ಮಧ್ಯದಲ್ಲಿ, ಲಖ್ನಾ ಇಂದುಮತಿಗೆ ಒಂದು ಕೋಣೆಯೊಳಗೆ ಮುಗ್ಧ ಮಕ್ಕಳನ್ನು ತಪ್ಪಾಗಿ ಕೊಂದಿದ್ದರಿಂದ ಬಾಘಿಗಳ ಸಂಪೂರ್ಣ ಗುಂಪು ಒಬ್ಬೊಬ್ಬರಾಗಿ ಕೊಲ್ಲಲ್ಪಟ್ಟ ಶಾಪದ ಬಗೆಗಿನ ಹಿನ್ನೆಲೆ ಕಥೆಯನ್ನು ಹೇಳುತ್ತಾನೆ. ಮತ್ತು ಶಾಪದಿಂದ ಮುಕ್ತರಾಗಲು ಅವರು ಸೋನ್‍ಚಿಡಿಯಾಳನ್ನು ('ಸಂರಕ್ಷಕ ಬಾಲಕಿ'ಗೆ ರೂಪಕವಾಗಿದೆ) ಪತ್ತೆಹಚ್ಚಬೇಕೆಂದು ಹೇಳುತ್ತಾನೆ. ಬಾಘಿಗಳು ಡಕಾಯಿತೆ ಫುಲಿಯಾಳನ್ನು ಭೇಟಿಯಾಗುತ್ತಾರೆ ಮತ್ತು ಅವಳು ರಕ್ತಸ್ರಾವವಾಗುತ್ತಿರುವ ಹುಡುಗಿಯನ್ನು ರಕ್ಷಿಸಲು ಮತ್ತು ಢೋಲ್‍ಪುರ್ ಆಸ್ಪತ್ರೆಗೆ ಕರೆದೊಯ್ಯಲು ಲಖ್ನಾನೊಂದಿಗೆ ಸೇರಿಕೊಳ್ಳುತ್ತಾಳೆ. ಈ ಕಾರ್ಯದಲ್ಲಿ ವಕೀಲ್ ಸಿಂಗ ಮತ್ತು ಗುಂಪು ಅವರನ್ನು ಮತ್ತೊಮ್ಮೆ ಸೇರಿಕೊಳ್ಳುತ್ತದೆ. "ಶಾಪವನ್ನು ಹೋಗಲಾಡಿಸಲು ಈ ಹುಡುಗಿಯನ್ನು ಸಾವಿನಿಂದ ರಕ್ಷಿಸಬೇಕು, ಇದು ಪರಿತಪಿಸುವ ಒಂದು ಅವಕಾಶವಾಗಿದೆ, ಈ ಹುಡುಗಿಯು "ನಮ್ಮ ಸೋನ್‍ಚಿಡಿಯಾ, ನಮ್ಮ ರಕ್ಷಕಿ"" ಎಂದು ವಕೀಲ್ ಹೇಳುತ್ತಾನೆ. ಇಂದುಮತಿಯ ಮಗನು ತನ್ನ ತಾಯಿಯನ್ನು ಕೊಲ್ಲಬೇಕೇಂದಿರುತ್ತಾನೆ ಆದರೆ ಲಖ್ನಾ ಎದುರು ಬಂದು ಅವನ ಅಜ್ಜನು ರಕ್ತಸಂಬಂಧದಿಂದ ಅವನ ತಂದೆಯಾಗಿದ್ದು ಅಜ್ಜನಲ್ಲ ಎಂಬ ಸತ್ಯವನ್ನು ಹೇಳುತ್ತಾನೆ. ಲಖ್ನಾ ಮತ್ತು ಇಂದುಮತಿ ಆಸ್ಪತ್ರೆ ತಲುಪುತ್ತಾರೆ.
ಹುಡುಗಿಯನ್ನು ಆಸ್ಪತ್ರೆಗೆ ಸೇರಿಸುತ್ತಿರುವಾಗ, ಗುಜ್ಜರ್‌ನಿಂದ ಬೆನ್ನಟ್ಟಲ್ಪಡುತ್ತಿರುವ ಲಖ್ನಾ ಮರದ ಹಿಂದೆ ಅಡಗಿಕೊಂಡಿದ್ದವನು ಶರಣಾಗಲು ಹೊರಬರುತ್ತಾನೆ ಏಕೆಂದರೆ ಸೋನ್‍ಚಿಡಿಯಾಳನ್ನು ಉಳಿಸುವ ತನ್ನ ಕಾರ್ಯವು ಮುಗಿದಿರುತ್ತದೆ. ಆದರೆ ಶಾಪದ ಕಾರಣ, ಗುಜ್ಜರ್ ಲಖ್ನಾನನ್ನು ಗುಂಡಿಕ್ಕಿ ಸಾಯಿಸುತ್ತಾನೆ.
ಅಂತ್ಯದಲ್ಲಿ, ವಕೀಲ್ ಸಿಂಗ್‍ನನ್ನು ಪೋಲೀಸರು ರೈಲು ನಿಲ್ದಾಣದಲ್ಲಿ ಕೊಂದಿರುತ್ತಾರೆ ಎಂದು ಬಹಿರಂಗವಾಗಿತ್ತದೆ, ಏಕೆಂದರೆ ಅವನ ಶವವನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಲಾಗುತ್ತದೆ. ನಂತರ, ಲಖ್ನಾನನ್ನು ಸಾಯಿಸಿ ಪೋಲಿಸ್ ಠಾಣೆ ಕಡೆಗೆ ಪ್ರಯಾಣಿಸುತ್ತಿರುವಾಗ, ಗುಜ್ಜರ್‌ನನ್ನು ಅವನ ಒಬ್ಬ ಠಾಕುರ್ ಪೋಲಿಸ್ ಪೇದೆಯು ಗುಂಡಿಕ್ಕಿ ಸಾಯಿಸುತ್ತಾನೆ. ಗುಜ್ಜರ್ ಅವನ ಚಿಕ್ಕಪ್ಪನ ಮೇಲೆ (ಜಿಪ್ಸಿಯಲ್ಲಿ ಅವನೊಂದಿಗಿರುವ ಮತ್ತೊಬ್ಬ ಪೋಲಿಸ್ ಪೇದೆ) ಹಲ್ಲೆ ಮಾಡಿ ಅವನನ್ನು ಅವಮಾನಿಸಿರುತ್ತಾನೆ.
ಚಿತ್ರದ ಪ್ರಧಾನ ಛಾಯಾಗ್ರಹಣವು ಚಂಬಲ್‍ನಲ್ಲಿ ೧೯ ಜನೆವರಿ ೨೦೧೮ರಂದು ಆರಂಭವಾಯಿತು.[೯][೧೦] ೧ ಎಪ್ರಿಲ್ ೨೦೧೮ರಂದು ಚಿತ್ರೀಕರಣವನ್ನು ಅಂತ್ಯಗೊಳಿಸಲಾಯಿತು.[೧೧]
ಚಿತ್ರದ ಸಂಗೀತವನ್ನು ವಿಶಾಲ್ ಭಾರದ್ವಾಜ್ ಸಂಯೋಜಿಸಿದ್ದಾರೆ. ಒಂದು ಹಾಡನ್ನು ಹೊರತುಪಡಿಸಿ (ಇದಕ್ಕೆ ಅಶೋಕ್ ಮಿಜ಼ಾಜ್ ಬದ್ರ್ ಸಾಹಿತ್ಯ ಬರೆದಿದ್ದಾರೆ) ಉಳಿದ ಹಾಡುಗಳಿಗೆ ಸಾಹಿತ್ಯವನ್ನು ವರುಣ್ ಗ್ರೋವರ್ ಬರೆದಿದ್ದಾರೆ.
ಹಾಡುಗಳ ಪಟ್ಟಿ | |||
---|---|---|---|
ಸಂ. | ಹಾಡು | ಗಾಯಕ(ರು) | ಸಮಯ |
1. | "ಬಾಘಿ ರೇ" | ಮಾಮೆ ಖಾನ್ | 4:42 |
2. | "ಸೋನ್‍ಚಿಡೈಯಾ" | ರೇಖಾ ಭಾರದ್ವಾಜ್ | 5:08 |
3. | "ರುವ್ಞಾ ರುವ್ಞಾ" | ಅರಿಜೀತ್ ಸಿಂಗ್ | 3:41 |
4. | "ನೆಯ್ನಾ ನಾ ಮಾರ್" | ಸುಖ್‍ವಿಂದರ್ ಸಿಂಗ್, ರೇಖಾ ಭಾರದ್ವಾಜ್ | 3:48 |
5. | "ಸ್ಞಾಪ್ ಖಾವೇಗಾ" | ಸುಖ್‍ವಿಂದರ್ ಸಿಂಗ್ | 4:01 |
6. | "ಸೋನ್‍ಚಿಡೈಯಾ" (ಪುನರಾವೃತ್ತಿ) | ರೇಖಾ ಭಾರದ್ವಾಜ್ | 4:59 |
7. | "ಬಾಘಿ ರೇ" (ರೀಮಿಕ್ಸ್) | ಮಾಮೆ ಖಾನ್ | 3:58 |
ಒಟ್ಟು ಸಮಯ: | 30:17 |
ಸಿಬಿಎಫ಼್‌ಸಿ ಬಹುತೇಕ ಬೈಗುಳಗಳು ಇರುವುದಕ್ಕೆ ಬಿಟ್ಟಿತು.[೧೨] ಅನೇಕ ಚಿತ್ರಮಂದಿರಗಳು ಅನಧಿಕೃತ ಡಬ್ ಮಾಡಿದ ಆವೃತ್ತಿಯನ್ನು ಬಳಸಿದ್ದು ಮುಖ್ಯ ನಟರಾದ ಸುಶಾಂತ್ ಸಿಂಗ್ ರಾಜ್‍ಪೂತ್‍ರನ್ನು ನಿರಾಶಗೊಳಿಸಿತು.[೧೩][೧೪]
ಫಿಲ್ಮ್‌ಫೇರ್ ಪ್ರಶಸ್ತಿಗಳು
Primarily action films are plot-heavy and the plot is usually centred around an object which the characters of the film are trying to get at. This film is also a plot-heavy action film, but it is more about the soul of a man.