ಸೌಂದರ್ಯ ರಜನಿಕಾಂತ್ | |
---|---|
![]() ೨೦೧೭ ರಲ್ಲಿ, ಸೌಂದರ್ಯರವರು | |
ಜನನ | ಶಕು ಬಾಯಿ ರಾವ್ ಗಾಯಕವಾಡ 20 September 1984 |
ಶಿಕ್ಷಣ(s) | ಗ್ರಾಫಿಕ್ ಡಿಸೈನರ್, ಚಲನಚಿತ್ರ ನಿರ್ಮಾಪಕಿ, ಚಲನಚಿತ್ರ ನಿರ್ದೇಶಕಿ |
Years active | ಪ್ರಸ್ತುತ ೨೦೦೨ |
Spouses |
|
ಮಕ್ಕಳು | ೨ |
Parents |
|
ಸಂಬಂಧಿಕರು | ನೋಡಿ ರಜನಿಕಾಂತ್ ಕುಟುಂಬ |
ಸೌಂದರ್ಯ ರಜನಿಕಾಂತ್ (ಜನನ ಶಕು ಬಾಯಿ ರಾವ್ ಗಾಯಕ್ವಾಡ್, ೨೦ ಸೆಪ್ಟೆಂಬರ್ ೧೯೮೪) ಇವರು ಭಾರತೀಯ ಗ್ರಾಫಿಕ್ ಡಿಸೈನರ್, ಚಲನಚಿತ್ರ ನಿರ್ಮಾಪಕಿ ಮತ್ತು ಚಲನಚಿತ್ರ ನಿರ್ದೇಶಕಿಯಾಗಿದ್ದು, ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಇವರು ಓಚರ್ ಪಿಕ್ಚರ್ ಪ್ರೊಡಕ್ಷನ್ಸ್‌ನ ಸ್ಥಾಪಕರು ಮತ್ತು ಮಾಲೀಕರು ಆಗಿದ್ದಾರೆ. ಸೌಂದರ್ಯರವರು ತಮ್ಮ ವೃತ್ತಿಜೀವನವನ್ನು ಚಲನಚಿತ್ರಗಳಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಪ್ರಾರಂಭಿಸಿದರು. ತಮ್ಮ ತಂದೆ ರಜನಿಕಾಂತ್‌ರವರು ನಟಿಸಿದ ಚಲನಚಿತ್ರಗಳ ಶೀರ್ಷಿಕೆ ದೃಶ್ಯಗಳನ್ನು ವಿನ್ಯಾಸಗೊಳಿಸುತ್ತಿದ್ದರು. ಅವರು ಗೋವಾ (೨೦೧೦) ಚಿತ್ರದ ಮೂಲಕ ಚಲನಚಿತ್ರ ನಿರ್ಮಾಪಕಿಯಾದರು ಹಾಗೂ ಕೊಚಡೈಯಾನ್ (೨೦೧೪) ಚಿತ್ರದ ಮೂಲಕ ಚಲನಚಿತ್ರ ನಿರ್ದೇಶಕಿಯಾಗಿ ಪಾದಾರ್ಪಣೆ ಮಾಡಿದರು.
ಶಕು ಬಾಯಿ ರಾವ್ ಗಾಯಕ್ವಾಡ್ ಆಗಿ ಜನಿಸಿದ ಸೌಂದರ್ಯ ರಜನಿಕಾಂತ್‌ರವರು ತಮ್ಮ ಬಾಲ್ಯದ ಶಿಕ್ಷಣವನ್ನು ಚೆನ್ನೈನ ವೆಲಾಚೇರಿಯಲ್ಲಿರುವ ಆಶ್ರಮ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಾಡಿದರು.[೧]
೨೦೦೭ ರಲ್ಲಿ, ಓಚರ್ ಸ್ಟುಡಿಯೋಸ್ ವಾರ್ನರ್ ಬ್ರದರ್ಸ್ ಎಂಟರ್ಟೈನ್ಮೆಂಟ್‌ನೊಂದಿಗೆ ತಮಿಳು ಚಲನಚಿತ್ರಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ಪಾಲುದಾರರಾಗಲು ಒಪ್ಪಂದಕ್ಕೆ ಸಹಿ ಹಾಕಿತು.[೨] ಅವರ ತಂದೆ ರಜನಿಕಾಂತ್‌ರವರು ನಟಿಸಿದ ೩ಡಿ ಆನಿಮೇಟೆಡ್ ಚಿತ್ರ ಸುಲ್ತಾನ್: ದಿ ವಾರಿಯರ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು.[೩] ಚಿತ್ರದ ಟೀಸರ್ ಮತ್ತು ಸಂವಾದಾತ್ಮಕ ವೆಬ್ಸೈಟ್ ಸೇರಿದಂತೆ ಭಾರಿ ಪೂರ್ವ-ನಿರ್ಮಾಣ ಪ್ರಚಾರದ ಹೊರತಾಗಿಯೂ, ಚಿತ್ರವನ್ನು ಕೈಬಿಡಲಾಯಿತು.[೪] ಬದಲಿಗೆ ಅವರು ರಜನಿಕಾಂತ್‌ರವರ ಮುಖ್ಯ ಪಾತ್ರದಲ್ಲಿ ನಟಿಸಿದ ಭಾರತದ ಮೊದಲ ಚಲನೆಯನ್ನು ಸೆರೆಹಿಡಿಯುವ ಚಿತ್ರವಾದ ಕೊಚಡೈಯಾನ್ ಅನ್ನು ನಿರ್ದೇಶಿಸಿದರು. ಕೊಚಡೈಯಾನ್ ಚಿತ್ರದ ಮೂಲಕ, ಸೌಂದರ್ಯಾ ತನ್ನ ತಂದೆಯನ್ನು ಚಲನಚಿತ್ರದಲ್ಲಿ ನಿರ್ದೇಶಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.[೫] ೨೦೧೪ ರ, ಎನ್‌ಡಿಟಿವಿ ಇಂಡಿಯನ್ ಆಫ್ ದಿ ಇಯರ್ ಪ್ರಶಸ್ತಿಗಳಲ್ಲಿ, ಅವರನ್ನು "ಚಲನಚಿತ್ರದಲ್ಲಿ ತಾಂತ್ರಿಕ ನಾವೀನ್ಯತೆಗಾಗಿ" ಗೌರವಿಸಲಾಯಿತು.[೬]
೨೦೧೬ ರಲ್ಲಿ, ಅವರು ಧನುಷ್, ಕಾಜಲ್ ಅಗರ್ವಾಲ್ ಮತ್ತು ಮಂಜಿಮಾ ಮೋಹನ್ ಅವರೊಂದಿಗೆ ನೀಲವುಕ್ಕು ಎನ್ ಮೆಲ್ ಎನ್ನಾಡಿ ಕೋಬಮ್ ಎಂಬ ಚಿತ್ರದ ಪೂರ್ವ-ನಿರ್ಮಾಣದಲ್ಲಿ ಕೆಲಸ ಮಾಡಿದರು.[೭] ಆದರೆ, ನಂತರ ಚಿತ್ರವನ್ನು ಕೈಬಿಡಲಾಯಿತು.[೮] ಸೌಂದರ್ಯ ಅವರ ಪಾಲ್ಗೊಳ್ಳುವಿಕೆಯಿಲ್ಲದೆ ಇದನ್ನು ೨೦೨೩ ರಲ್ಲಿ, ಪುನರುಜ್ಜೀವನಗೊಳಿಸಲಾಯಿತು. ಅವರ ಮುಂದಿನ ನಿರ್ದೇಶನದ ಚಿತ್ರವಾದ ವೆಲೈಲ್ಲಾ ಪಟ್ಟಧಾರಿ ೨, ಇದನ್ನು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರೀಕರಿಸಲಾಯಿತು.[೯][೧೦]
೨೦೧೯ ರಲ್ಲಿ, ಅವರು ಮೇ ೬ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದರು.[೧೧] ಅವರು ಧ್ವನಿ ಸಂದೇಶಗಳನ್ನು ಆಧರಿಸಿದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಹೂಟ್ ಅನ್ನು ಸ್ಥಾಪಿಸಿದರು.
ಸೌಂದರ್ಯರವರು ರಜನಿಕಾಂತ್ ಮತ್ತು ಅವರ ಪತ್ನಿ ಲತಾ ರಜನಿಕಾಂತ್ ಅವರ ಕಿರಿಯ ಮಗಳು. ಅವರಿಗೆ ಐಶ್ವರ್ಯಾ ರಜನಿಕಾಂತ್ ಎಂಬ ಅಕ್ಕ ಇದ್ದಾರೆ.
ಸೌಂದರ್ಯ ಅವರು ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಅವರನ್ನು ಸೆಪ್ಟೆಂಬರ್ ೩, ೨೦೧೦ ರಂದು ಚೆನ್ನೈನ ರಾಣಿ ಮೇಯಮ್ಮೈ ಹಾಲ್‌ನಲ್ಲಿ ವಿವಾಹವಾದರು.[೧೨] ದಂಪತಿಗೆ ೬ ಮೇ ೨೦೧೫ ರಂದು ಜನಿಸಿದ ಮಗನಿದ್ದಾನೆ.[೧೩] ಸೆಪ್ಟೆಂಬರ್ ೨೦೧೬ ರಲ್ಲಿ, ಸೌಂದರ್ಯ ಅವರು ಮತ್ತು ಅವರ ಪತಿ ಹೊಂದಾಣಿಕೆಯಾಗದ ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಬಹಿರಂಗಪಡಿಸಿದರು.[೧೪] ಜುಲೈ ೨೦೧೭ ರಲ್ಲಿ, ದಂಪತಿಗಳು ಅಧಿಕೃತವಾಗಿ ವಿಚ್ಛೇದನ ಪಡೆದರು.[೧೫]
ಅವರು ನಟ ಮತ್ತು ಉದ್ಯಮಿಯಾದ ವಿಶಾಗನ್ ವನಂಗಮುಡಿ ಅವರನ್ನು ಫೆಬ್ರವರಿ ೧೧, ೨೦೧೯ ರಂದು ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ವಿವಾಹವಾದರು.[೧೬][೧೭][೧೮][೧೯] ಅವರ ಮಗ ವೀರ್ ೨೦೨೨ ರಲ್ಲಿ ಜನಿಸಿದರು.[೨೦][೨೧]
ವರ್ಷ | ಚಲನಚಿತ್ರ | ಟಿಪ್ಪಣಿಗಳು |
---|---|---|
೧೯೯೯ | ಪಡಯಪ್ಪ | ಗ್ರಾಫಿಕ್ ಡಿಸೈನರ್ (ಶೀರ್ಷಿಕೆ ಸ್ಕೆಚ್ ಮಾತ್ರ) |
೨೦೦೨ | ಬಾಬಾ | ಗ್ರಾಫಿಕ್ ಡಿಸೈನರ್ (ಶೀರ್ಷಿಕೆ ಅನುಕ್ರಮ ಮಾತ್ರ) |
೨೦೦೫ | ಚಂದ್ರಮುಖಿ | |
ಅಂಬೆ ಆರುಯಿರೆ | ಗ್ರಾಫಿಕ್ ಡಿಸೈನರ್ | |
ಶಿವಕಾಶಿ | ||
ಮಜಾ | ||
ಸಂಡಕೋಜಿ | ||
೨೦೦೭ | ಚೆನ್ನೈ ೬೦೦೦೨೮ | |
ಶಿವಾಜಿ | ಗ್ರಾಫಿಕ್ ಡಿಸೈನರ್ (ಶೀರ್ಷಿಕೆ ಅನುಕ್ರಮ ಮಾತ್ರ) | |
೨೦೦೮ | ಕುಸೇಲನ್ | ನಟ; "ಸಿನಿಮಾ ಸಿನಿಮಾ" ಹಾಡಿನಲ್ಲಿ ಅತಿಥಿ ಪಾತ್ರ |
೨೦೧೦ | ಗೋವಾ | ನಿರ್ಮಾಪಕಿ |
೨೦೧೪ | ಕೊಚ್ಚಡೈಯಾನ್ | ನಿರ್ದೇಶಕ, ಗ್ರಾಫಿಕ್ ಡಿಸೈನರ್, "ಎಂಗೆ ಪೋಗುತೋ ವನಂ" ನಲ್ಲಿ ವಿಶೇಷ ಪಾತ್ರ |
೨೦೧೭ | ವೆಲೈಯಿಲ್ಲ ಪಟ್ಟಧಾರಿ ೨ | ನಿರ್ದೇಶಕಿ |