ಸ್ಪೆರೋಥೆಕಾ ವರ್ಷಾಭು ಎಂಬುದು ಒಂದು ಕಪ್ಪೆಯ ಪ್ರಬೇಧ. ಇವು ಬಿಲದ ಕಪ್ಪೆ ವರ್ಗದಡಿಯಲ್ಲಿ ಬರುವ ಕಪ್ಪೆಯ ಜಾತಿಯಾಗಿದೆ. ೨೦೨೪ರಲ್ಲಿ ಬೆಂಗಳೂರಿನ ರಾಜಾನುಕುಂಟೆ ಹತ್ತಿರದ ಬುದುಮನಹಳ್ಳಿಯಲ್ಲಿ ಇದು ಮೊದಲ ಬಾರಿಗೆ ಪತ್ತೆಯಾಯಿತು. [೧][೨] ಇವು ಮಳೆಯ ಆರಂಭದಲ್ಲಿ ಹೊರಗೆ ಕಾಣಸಿಗುವುದರಿಂದ ಇದಕ್ಕೆ 'ವರ್ಷಾಭು' ಎನ್ನುವ ಹೆಸರಿಡಲಾಗಿದೆ. ಸಂಸ್ಕೃತದಲ್ಲಿ ವರ್ಷಾ ಎಂದರೆ ಮಳೆ, ಮತ್ತು ಭೂ ಎಂದು ಹುಟ್ಟುವುದು. ಈ ಕಪ್ಪೆಯ ಕುರಿತ ಅಧ್ಯಯನ ವರದಿಯು ನ್ಯೂಝಿಲ್ಯಾಂಡಿನ ಅಂತಾರಾಷ್ಟ್ರೀಯ ಜರ್ನಲ್ ಝೂಟಾಕ್ಸಾದಲ್ಲಿ ಪ್ರಕಟವಾಗಿದೆ.[೩]
ಇವು ಸಾಮಾನ್ಯವಾಗಿ ನೆಲದಡಿಯಲ್ಲಿ ವಾಸಿಸುತ್ತವೆ. ಮಳೆಯ ನೀರು ಬಿದ್ದು ನೆಲವು ಒದ್ದೆಯಾದಾಗ ಮತ್ತು ನೀರು ಒಳಹೋದಾಗ ಇವು ಹೊರಬರುತ್ತವೆ. ಮಳೆಯಿಂದ ಇವು ಮಾನ್ಸೂನ್ ಬರುವನ್ನು ತಿಳಿದುಕೊಳ್ಳುತ್ತವೆ. ಮಳೆಗಾಲ ಹೊರತಾದ ಋತುಮಾನದಲ್ಲಿ ಮಣ್ಣಿನ ಒಳಗಿನ ಬಿಲಗಳಲ್ಲಿ ವಾಸಿಸುತ್ತವೆ. ಇದರ ಕಾಲಿನ ಪಾದಗಳಲ್ಲಿ ಹಾರಿ ಮಾದರಿ ಚಿಕ್ಕ ಅಂಗಾಂಗಗಳಿದ್ದು ಮಣ್ಣನ್ನು ಅಗೆದು ಬಿಲ ನಿರ್‍ಮಿಸಿಕೊಳ್ಳುತ್ತವೆ. ಇವು ನಗರೀಕರಣಕ್ಕೆ ಹೊಂದಿಕೊಂಡಂತಹ ಗುಣ ಹೊಂದಿದ್ದು ಸಾಮಾನ್ಯ ಇತರ ಕಪ್ಪೆಗಳಂತೆ ಕೆರೆ ಮುಂತಾದ ನೀರಿನ ತಾಣಗಳ ದಂಡೆಗಳಲ್ಲಿ ವಾಸಿಸುವುದಿಲ್ಲ. ಮಳೆಗಾಗದಲ್ಲಿ ಹೊರತುಪಡಿಸಿ ಬೇರೆ ಕಾಲಗಳಲ್ಲಿ ಇವು ಹೊರಗೆ ಕಾಣದೇ ಬಿಲಗಳಲ್ಲಿ ವಾಸಿಸುತ್ತವೆ. [೪]
ಬಿಲಗಪ್ಪೆಗಳು ದಕ್ಷಿಣಾ ಏಷಿಯಾದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ 'ವರ್ಷಾಭು' ಕಪ್ಪೆಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ನಗರದ ಪರಿಸರಕ್ಕೆ ಹೊಂದಿಕೊಂಡು ಜೀವಿಸಿವೆ. ನಗರ ಪರಿಸರಕ್ಕೆ ಹೊಂದಿಕೊಂಡ ನಡವಳಿಕೆಗಳು ಮತ್ತು ದೈಹಿಕ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ.
ಈ ಕಪ್ಪೆಯ ಪತ್ತೆಯು ಹಲವು ಸಂಸ್ಥೆಗಳ ಸಾಂಘಿಕ ಪ್ರಯತ್ನದಿಂದ ಆಯಿತು. ಅವುಗಳೆಂದರೆ,