ಸ್ವರಾಜ್ (ಟಿವಿ ಧಾರಾವಾಹಿ) | |
---|---|
ಶೈಲಿ | ಭಾರತೀಯ ಕ್ರಾಂತಿಕಾರಿಗಳು |
ರಚನಾಕಾರರು | ಅಭಿಮನ್ಯು ಸಿಂಗ್ |
ತಯಾರಕರು | ಅಭಿಮನ್ಯು ಸಿಂಗ್ |
ನಟರು | ಜೇಸನ್ ಶಾ ಮನೋಜ್ ಜೋಶಿ ಅಮೀರ್ ರಫೀಕ್ ಸಂಜಯ್ ಸ್ವರಾಜ್ ಹೃಷಿತಾ ಭಟ್ |
ದೇಶ | ಭಾರತ |
ಭಾಷೆ(ಗಳು) | ಹಿಂದಿ |
ನಿರ್ಮಾಣ | |
ನಿರ್ಮಾಪಕ(ರು) | ಅಭಿಮನ್ಯು ಸಿಂಗ್ |
ಕ್ಯಾಮೆರಾ ಏರ್ಪಾಡು | ಮಲ್ಟಿ-ಕ್ಯಾಮೆರಾ |
ಸಮಯ | 45 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ಕಾಂಟಿಲೋ ಎಂಟರ್ಟೈನ್ಮೆಂಟ್ |
ಪ್ರಸಾರಣೆ | |
ಮೂಲ ವಾಹಿನಿ | ದೂರದರ್ಶನ ೧(ಮೂಲ) ಡಿಡಿ ಚಂದನ(ಕನ್ನಡ) |
Original airing | 14 ಆಗಸ್ಟ್ 2022 |
'ಸ್ವರಾಜ್[೧][೨][೩] ಭಾರತೀಯ ಐತಿಹಾಸಿಕ ಟಿವಿ ಧಾರಾವಾಹಿಯಾಗಿದ್ದು, ಇದು 14 ಆಗಸ್ಟ್ 2022 ರಿಂದ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾಗುತ್ತದೆ. ಡಿಡಿ ನ್ಯಾಷನಲ್‌ನಲ್ಲಿ ಪ್ರಸಾರವಾದ ನಂತರ ಮುಂದಿನವಾರ ಶನಿವಾರ ಇದರ ಅನುವಾದಿತ ಪ್ರಸಂಗವು ರಾತ್ರಿ 8 ಗಂಟೆಗೆ ಡಿಡಿ ಚಂದನದಲ್ಲಿ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಈ ಧಾರಾವಾಹಿಯ ಮೂಲಕ ದೂರದರ್ಶನ ಮತ್ತೊಮ್ಮೆ 550 ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಸಾಹಸಗಾಥೆಗಳನ್ನು ಜೀವಂತಗೊಳಿಸುವ ಪ್ರಯತ್ನ ಮಾಡಿದೆ. ಇದು ಭಾರತ ಸರ್ಕಾರದ ಯೋಜನೆಯಾಗಿದೆ ಮತ್ತು ಕಾಂಟಿಲೋ ಪಿಕ್ಚರ್ಸ್ ನಿರ್ಮಿಸಿದೆ.