ಹಟ್ಟಿ ಚಿನ್ನದ ಗಣಿ

ಹಟ್ಟಿ ಚಿನ್ನದ ಗಣಿ

ಹಟ್ಟಿ ಚಿನ್ನದ ಗಣಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ರಾಯಚೂರು
ನಿರ್ದೇಶಾಂಕಗಳು 16.197° N 76.66° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೮೪೧೧೫
 - +೦೮೫೩೭
 - ಕೆ ಎ ೩೬
ಅಂತರ್ಜಾಲ ತಾಣ: http://huttigold.co.in/hutti/index/kannada

ಹಟ್ಟಿ ಚಿನ್ನದ ಗಣಿ ಕಂಪನಿಯು ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನಲ್ಲಿರುವ ಹಟ್ಟಿಗ್ರಾಮದಲ್ಲಿರುವ ಸರ್ಕಾರಿ ಉದ್ಯಮವಾಗಿದೆ. ಹೈದರಾಬಾದ್ ಚಿನ್ನದ ಗಣಿಗಳೆಂದು ೧೯೪೭ರಲ್ಲಿ ಸ್ಥಾಪನೆಯಾಗಿದ್ದು, ಹೈದರಾಬಾದ್ ನಿಜಾಮರ ಆಳ್ವಿಕೆಯ ವಿಮೋಚನೆಯ ನಂತರ ಕರ್ನಾಟಕ ಸರ್ಕಾರದ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಎಂದು ಆಯಿತು.[]. ಗಣಿಯ ನೋಂದಾಯಿತಿ ಕಛೇರಿಯು ಬೆಂಗಳೂರಿನಲ್ಲಿದ್ದು, ಇತರೆ ಸಣ್ಣ ಘಟಕಗಳು ಚಿತ್ರದುರ್ಗ, ಮಾನ್ವಿ ತಾಲೂಕಿನ ಹೀರಾಬುದ್ದಿನಿ ಮತ್ತು ದೇವದುರ್ಗ ತಾಲೂಕಿನ ಊಟಿ ಯಲ್ಲಿಯೂ ಇವೆ.[] ಕೋಲಾರ ಚಿನ್ನದ ಗಣಿ ಮುಚ್ಚಿದ ನಂತರ ಹಟ್ಟಿ ಚಿನ್ನದ ಗಣಿಯು ದೇಶದಲ್ಲೇ ಅತಿ ಹೆಚ್ಚು ಮತ್ತು ಪ್ರಾಥಮಿಕ ಚಿನ್ನ ಉತ್ಪಾದಿಸುವ ಗಣಿಯಾಗಿದೆ.[]

ಇತಿಹಾಸ

[ಬದಲಾಯಿಸಿ]

ಇತಿಹಾಸ ತಙ್ಞರ ಪ್ರಕಾರ ಸಿಂಧೂ ನಾಗರೀಕತೆ ಸಮಯದಿಂದಲೇ ಇಲ್ಲಿಂದ ಹಾಗೂ ಕೋಲಾರ ಚಿನ್ನದ ಗಣಿಯಿಂದ ಚಿನ್ನ ರಫ್ತಾಗುತ್ತಿದೆ. ಹಟ್ಟಿ ಚಿನ್ನದ ಗಣಿಯಲ್ಲಿ ಅಶೋಕನ ಕಾಲಕ್ಕಿಂತಲೂ ಮೊದಲೇ ಇಲ್ಲಿ ಗಣಿಗಾರಿಕೆ ನಡೆದಿರುವುದು ಪತ್ತೆಯಾಗಿದೆ. ೧೮೮೭ರಲ್ಲಿ ಹೈದರಾಬಾದ್ ನಿಜಾಮನಿಗೋಸ್ಕರ ಗಣಿಯನ್ನು 'ಹೈದರಾಬಾದ್ ಡೆಕ್ಕನ್ ಕಂಪನಿ'ಯು ಚಿನ್ನದ ಗಣಿಗಾರಿಕೆಯನ್ನು ಮಾಡಲ್ಲಿ ಪ್ರಾರಂಭಿಸಿತು. ೧೮೮೦ರಿಂದ ೧೯೨೦ರವರೆಗೆ ಜಾನ್ ಟೈಲರ್ಸ್ ಮತ್ತು ಮಕ್ಕಳಿಂದ ಆಧುನಿಕ ಗಣಿಗಾರಿಕೆಯನ್ನು ಕೈಗೊಳ್ಳಲಾಯಿತು. ೧೯೦೨ರಿಂದ ೧೯೧೮ರ ಅವಧಿಯಲ್ಲಿ ಮೆಯಿನ್ ರೀಫ್ ಒಂದೇ ೩.೮ಲಕ್ಷ ಟನ್ ಅದಿರು ಉತ್ಪಾದಿಸಿ, ೭.೪೧ ಟನ್ ಚಿನ್ನವನ್ನು ಟನ್ನಿಗೆ ೧೯.೪೫ ಗ್ರಾಂ.ದರದಲ್ಲಿ ಉತ್ಪಾದಿಸಿತು ಮತ್ತು ಗಣಿಯನ್ನು ೧೦೫೨ಮೀ. ಆಳಕ್ಕೆ ಕೊರೆಯುಲಾಯಿತು. ೧೯೨೦ರಲ್ಲಿ ಗಣಿಯನ್ನು ಸಾಮಗ್ರಿಗಳ ಕೊರತೆ, ಹಣದ ಮುಗ್ಗಟ್ಟು ಮತ್ತು ಒಂದನೇ ಜಾಗತಿಕ ಯುದ್ಧದಿಂದಾಗಿ ಮುಚ್ಚಲಾಯಿತು. ೧೯೩೮ರಲ್ಲಿ ಭೂಗರ್ಭ ಮತ್ತು ಭೂಭೌತ ನಿಯಮಗಳ ಪ್ರಕಾರ ವಿವರವಾದ ಅನ್ವೇಷಣೆ ಜೊತೆಗೆ ವಿಲ್ಲೇಜ್ ರೀಫ್ ಗಣಿಯಲ್ಲಿ ಡೈಮಂಡ್ ಡ್ರಿಲ್ಲಿಂಗ್ ಮತ್ತು ನೀರನ್ನು ಖಾಲಿ ಮಾಡಿದ್ದರಿಂದ ಜೋನ್ - ೧ ಮತ್ತು ಓಕ್ಲೇ ರೀಫುಗಳನ್ನು ಪುನಃ ಕಂಡುಹಿಡಿಯಲಾಯಿತು. ೧೯೪೭ರ ಜುಲೈ ೮ರಂದು 'ಹೈದರಾಬಾದ್ ಚಿನ್ನದ ಗಣಿಗಳ ಕಂಪನಿ ನಿಯಮಿತ'ವನ್ನು ಸಂಘಟಿಸಿ ಗಣಿಗಾರಿಕೆ ಕೆಲಸಗಳನ್ನು 'ಜಾನ್ ಟೇಲರ್ ಮತ್ತು ಮಕ್ಕಳು' ಅವರಿಗೆ ಹೈದರಾಬಾದ್ ನಿಜಾಮರು ವಹಿಸಿಕೊಟ್ಟರು. ೧೯೫೬ರಲ್ಲಿ ರಾಜ್ಯಗಳ ಪುನರ್-ವಿಂಗಡಣೆಯಿಂದಾಗಿ ಮೈಸೂರು(ಈಗಿನ ಕರ್ನಾಟಕ) ರಾಜ್ಯ ಉದಯವಾದಾಗ ಅದರ ಹೆಸರನ್ನು 'ದಿ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ' ಎಂದು ಮರುನಾಮಕರಣ ಮಾಡಲಾಯಿತು.[]

ಆಡಳಿತ

[ಬದಲಾಯಿಸಿ]

ಕರ್ನಾಟಕ ಸರ್ಕಾರವು ಗಣಿ ಮತ್ತು ಭೂವಿಜ್ಞಾನ ರಾಜ್ಯ ಸಚಿವರ ಅಡಿಯಲ್ಲಿ ನಿರ್ದೇಶಕರ ಮಂಡಳಿಯ ರಚಸುತ್ತದೆ ಮತ್ತು ಒಬ್ಬ ಭಾರತದ ಆಡಳಿತ ಸೇವೆಯ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುತ್ತದೆ.[] ಇವರು ತಮ್ಮ ಬೆಂಗಳೂರಿನ ಕಛೇರಿಯಿಂದ ಕಾರ್ಯನಿರ್ವಹಿಸುತ್ತಾರೆ ಮತ್ತು ಅಗತ್ಯವಿದ್ದಾಗ ಹಟ್ಟ ಚಿನ್ನದ ಗಣಿಗೆ ಬೇಟಿ ನೀಡುತ್ತಾರೆ. ಇತರೆ ಬಹುತೇಕ ಹಿರಿಯ ಅಧಿಕಾರಿಗಳು ಹಟ್ಟಿಯಲ್ಲೇ ನೆಲೆಸಿರುತ್ತಾರೆ.[] ೨೦೧೫ರಲ್ಲಿ ಕೋಲಾರದ ಚಿನ್ನದ ಗಣಿಯನ್ನು ಹಟ್ಟಿ ಚಿನ್ನದ ಗಣಿಯ ಆಡಳಿತದಲ್ಲಿ ತರುವ ಬಗ್ಗೆ ಚರ್ಚೆಯಾಗುತ್ತಿತ್ತು.[]

ಗಣಿಗಾರಿಕೆ

[ಬದಲಾಯಿಸಿ]

ಈಗಿನ ಗಣಿಯು ಸುಮಾರು ೨೭ಹಂತಗಳಲ್ಲಿ ೮೨೫ ಮೀಟರ್ ಆಳವನ್ನು ತಲುಪಿದೆ. ೭೧.೭೭ಟನ್ ಗಳಷ್ಟು ಚಿನ್ನವನ್ನು ಇಲ್ಲಿಯವರೆಗೂ ಸುಮಾರು ೧೧.೧೨ದಶಲಕ್ಷ ಟನ್ ಅದಿರನಿಂದ ಉತ್ಪಾದಿಸಲಾಗದೆ. ೨೦೦೮ರಲ್ಲಿ ಮಾಡಿದ ಅಂದಾಜಿನ ಪ್ರಕಾರ ಪ್ರತಿ ಟನ್ ಅದಿರಿಗೆ ೫.೭೯ಗ್ರಾಂ ಚಿನ್ನವನ್ನು ತೆಗೆಯಲಾಗುತ್ತಿದೆ.[]. ೨೦೧೩ರಲ್ಲಿ ಪ್ರತಿ ಗ್ರಾಂ ಚಿನ್ನಕ್ಕೆ ಸರಾಸರಿ ೧,೯೦೦₹ಗಳು ಕರ್ಚಾಗುತ್ತದೆ ಮತ್ತು ಪ್ರತಿ ಟನ್ ಅದಿರಿಗೆ ೩ಗ್ರಾಂ ಚಿನ್ನವು ಸಿಗುತ್ತಲ್ಲದೆ.[] ಗಣಿಯ ವಿವಿಧ ಹಂತಗಳಲ್ಲಿ ಸುಮಾರು ೪ಸಾವಿರಕ್ಕೂ ಹೆಚ್ಚು ಕೆಲಸಗಾರರಿದ್ದು, ವಸತಿ ಹಾಗೂ ಆರೋಗ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.[೧೦]

ಸಾರಿಗೆ ಸೌಲಭ್ಯ

[ಬದಲಾಯಿಸಿ]

ಹಟ್ಟಿ ಚಿನ್ನದ ಗಣಿಯು ಜಿಲ್ಲಾ ಕೇಂದ್ರವಾದ ರಾಯಚೂರಿನಿಂದ ಪಶ್ಚಿಮ ದಿಕ್ಕಿನಲ್ಲಿ ೮೦ ಕಿಲೋ ಮೀಟರ್ ದೂರದಲ್ಲಿದೆ ಹಾಗೂ ತಾಲೂಕು ಕೇಂದ್ರವಾದ ಲಿಂಗಸೂಗೂರಿನಿಂದ ೨೦ ಕಿಲೋ ಮೀಟರ್ ದೂರದಲ್ಲಿದೆ. ಹತ್ತಿರದ ರೈಲ್ವೇ ನಿಲ್ದಾಣ ರಾಯಚೂರು ನಗರದಲ್ಲಿದೆ.[]

ಉಲ್ಲೀಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-01-05. Retrieved 2015-12-14.
  2. "ಆರ್ಕೈವ್ ನಕಲು". Archived from the original on 2016-03-05. Retrieved 2015-12-14.
  3. "ಆರ್ಕೈವ್ ನಕಲು". Archived from the original on 2016-04-11. Retrieved 2015-12-14.
  4. "ಆರ್ಕೈವ್ ನಕಲು". Archived from the original on 2016-03-05. Retrieved 2015-12-14.
  5. "ಆರ್ಕೈವ್ ನಕಲು". Archived from the original on 2016-10-30. Retrieved 2015-12-14.
  6. "ಆರ್ಕೈವ್ ನಕಲು". Archived from the original on 2016-10-30. Retrieved 2015-12-14.
  7. http://www.deccanherald.com/content/467862/state-run-hutti-gold-mines.html
  8. ೮.೦ ೮.೧ "ಆರ್ಕೈವ್ ನಕಲು". Archived from the original on 2016-10-30. Retrieved 2015-12-14.
  9. http://indianexpress.com/article/news-archive/web/treasure-trail/
  10. "ಆರ್ಕೈವ್ ನಕಲು". Archived from the original on 2016-03-05. Retrieved 2015-12-14.