ಹರಿದತ್ತ | |
---|---|
ಜನನ | ca.650 CE |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಖಗೋಳಶಾಸ್ತ್ರಜ್ಞ-astrologer |
ಗಮನಾರ್ಹ ಕೆಲಸಗಳು | Promulgation of the Parahita system of astronomical computations |
ಹೆಸರಾಂತ ಕೆಲಸಗಳು | ಗ್ರಹಚಾರಿಣಿಬಂಧನ |
Notes | |
Promulgated the Parahita system of astronomical computations in 683 CE at ತಿರುವನ್ನವಾಯ. |
ಹರಿದತ್ತ (c. ೬೮೩ ಕ್ರಿ. ಶ) ಒಬ್ಬ ಖಗೋಳಶಾಸ್ತ್ರಜ್ಞ - ಭಾರತದ ಕೇರಳದ ಗಣಿತಶಾಸ್ತ್ರಜ್ಞ, ಇವರು ಖಗೋಳ ಗಣನೆಗಳ ಪರಹಿತ ವ್ಯವಸ್ಥೆಯ ಪ್ರವರ್ತಕ ಎಂದು ನಂಬಲಾಗಿದೆ. ಈ ಗಣನೆಯ ವ್ಯವಸ್ಥೆಯು ಕೇರಳ ಮತ್ತು ತಮಿಳುನಾಡಿನಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ದಂತಕಥೆಗಳ ಪ್ರಕಾರ, ಹರಿದತ್ತನು ಕ್ರಿ.ಶ.೬೮೩ ರಲ್ಲಿ ನಡೆದ ಮಾಮಾಂಕಮ್ ಸಂದರ್ಭದಲ್ಲಿ ಪರಹಿತ ಪದ್ದತಿಯನ್ನು ಘೋಷಿಸಿದನು. ಮಾಮಾಂಕಂ ಎಂಬುದು ಭರತಪುಳ ನದಿಯ ದಡದಲ್ಲಿರುವ ತಿರುನ್ನವಾಯದಲ್ಲಿ ೧೨ ವರ್ಷಗಳಿಗೊಮ್ಮೆ ನಡೆಯುವ ಉತ್ಸವವಾಗಿದೆ.
ಹರಿದತ್ತನ ವಿಶಿಷ್ಟ ಕೊಡುಗೆ, ಆರ್ಯಭಟೀಯ ಲೆಕ್ಕಾಚಾರಗಳನ್ನು ಪರಿಹರಿಸುವುದು ಮತ್ತು ಅಂಕಿಗಳ ಕಟಪಯಾದಿ ವ್ಯವಸ್ಥೆಯನ್ನು ಬಳಸುವುದು. ಇದರ ಜೊತೆಗೆ ಅವರು ಚಂದ್ರ ಮತ್ತು ಇತರ ಗ್ರಹಗಳ ಸರಾಸರಿ ಮತ್ತು ನಿಜವಾದ ಸ್ಥಾನಗಳ ಮೌಲ್ಯಗಳು, ವೇಗ ಇತ್ಯಾದಿಗಳ ಮೌಲ್ಯಗಳಿಗೆ ಆರ್ಯಭಟನ ಸ್ಥಿರಾಂಕಗಳನ್ನು ಅನುಸರಿಸಿ ತಿದ್ದುಪಡಿಗಳನ್ನು ಪರಿಚಯಿಸಿದರು. ಈ ತಿದ್ದುಪಡಿಯನ್ನು ಶಕ ೪೪೪ ರಲ್ಲಿ ಆರ್ಯಭಟನ ದಿನಾಂಕದಿಂದ ಅನ್ವಯಿಸುವುದರಿಂದ ಇದನ್ನುಶಕಾಬ್ದ -ಸಂಸ್ಕಾರ ಎಂದು ಕರೆಯಲಾಗುತ್ತದೆ. ಆ ದಿನಾಂಕದಂದು ಅವನ ಸ್ಥಿರಾಂಕಗಳು ನಿಖರವಾದ ಫಲಿತಾಂಶಗಳನ್ನು ನೀಡಿತು. [೧]
ಹರಿದತ್ತ ಪರಿಚಯಿಸಿದ ಪರಹಿತಾ ಪದ್ದತಿಯು ಆರ್ಯಭಟನಿಂದ ಆರ್ಯಭಟಿಯದಲ್ಲಿ ಪ್ರತಿಪಾದಿಸಿದ ವ್ಯವಸ್ಥೆಯ ಸರಳೀಕರಣವಾಗಿದೆ. ಹರಿದತ್ತ ಈ ಕೆಳಗಿನ ಸರಳೀಕರಣಗಳನ್ನು ಪರಿಚಯಿಸಿದರು. [೨] ಇದು ಸಾಮಾನ್ಯ ಮನುಷ್ಯನಿಗೆ ಕೂಡಾ ಸೂಕ್ತವಾಗಿದೆ ಏಕೆಂದರೆ ಇದು ಖಗೋಳಶಾಸ್ತ್ರದ ಲೆಕ್ಕಾಚಾರಗಳನ್ನು ಸರಳೀಕರಿಸಿತು ಮತ್ತು ಸಾಮಾನ್ಯ ವ್ಯಕ್ತಿಗಳಿಗೂ ಅಭ್ಯಾಸಕ್ಕೆ ಒದಗುವಂತೆ ಮಾಡಿತು. ಆದುದರಿಂದ ಈ ವ್ಯವಸ್ಥೆಯನ್ನು ಪರಹಿತ ಎಂದು ಕರೆಯಲಾಯಿತು.
ವಿದ್ವಾಂಸರು ಹರಿದತ್ತ ಬರೆದ ಎರಡು ಕೃತಿಗಳನ್ನು ಮಾತ್ರ ಗುರುತಿಸಲು ಸಾಧ್ಯವಾಯಿತು. ಅವುಗಳಲ್ಲಿ ಒಂದು, ಗ್ರಹಚರಣಿಬಂಧನ ಎಂಬ ಶೀರ್ಷಿಕೆಯು, ಖಗೋಳಶಾಸ್ತ್ರದ ಪರಹಿತ ವ್ಯವಸ್ಥೆಯ ಲೆಕ್ಕಾಚಾರಗಳ ಮೂಲ ಕೈಪಿಡಿಯಾಗಿದೆ. ಇದನ್ನು ಕೆ.ವಿ.ಶರ್ಮಾ ಅವರು ಸಂಶೋಧಿಸಿ ೧೯೫೪ [೩] ರಲ್ಲಿ ಪ್ರಕಟಿಸಿದರು. ಮಹಾಮಾರ್ಗನಿಬಂಧನ ಎಂಬ ಇನ್ನೊಂದು ಕೃತಿಯು ಈಗ ಉಳಿದಿಲ್ಲ.