ಹರಿದಾಸ ಭಕ್ತಿ ಚಳುವಳಿಯು ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಒಂದು ಮಹತ್ವದ ತಿರುವು ನೀಡಿತ್ತು. ಆರು ಶತಮಾನಗಳ ಅವಧಿಯಲ್ಲಿ ಹಲವು ಸಂತರು ಹಾಗು ಯೊಗಿಗಳು ದಕ್ಷಿಣ ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಸಂಸ್ಕಾರ, ತತ್ವ ಹಾಗು ಕಲೆಯನ್ನು ರೂಪಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ, ಅವರು ಸಾಕಷ್ಟು ಧಾರ್ಮಿಕ ಪ್ರಭಾವವನ್ನು ಜನ ಸಮೂಹ ಹಾಗು ದಕ್ಷಿಣ ಭಾರತವನ್ನು ಆಳಿದ ರಾಜ್ಯಗಳ ಮೇಲೆ ಬೀರಿದರು.[೧]
ಈ ಚಳುವಳಿಯನ್ನು ಪ್ರಾರಂಭಿಸಿದ್ದು ಹರಿದಾಸರು (ಕನ್ನಡ:ಹರಿದಾಸರು,ಇದರ ಅಕ್ಷರಶಃ ಅರ್ಥವೆಂದರೆ 'ಹರಿಯ ಸೇವಕರು') ಹಾಗು ಆಕಾರ ಪಡೆದದ್ದು ೧೩ನೆಯ- ೧೪ನೆಯ ಶತಮಾನದ, ಕಾಲಮಾನದಲ್ಲಿ, ವಿಜಯನಗರ ಸಾಮ್ರಾಜ್ಯ ಆಳ್ವಿಕೆಯಾ ಕಾಲದಲ್ಲಿ ಹಾಗು ಅದರ ಮುನ್ನ. ಈ ಚಳುವಳಿಯ ಮುಕ್ಯ ಗುರಿ ಮಧ್ವಾಚಾರ್ಯರ ದ್ವೈತ ತತ್ತ್ವಶಾಸ್ತ್ರ (ಮಧ್ವ ಸಿದ್ಧಾಂತ )ವನ್ನು ಜನಸಾಮಾನ್ಯರಲ್ಲಿ ದಾಸ ಸಾಹಿತ್ಯ (ಭಗವಂತನ ಸೇವಕರ ಸಾಹಿತ್ಯ)ದ ಮಾಧ್ಯಮದಲ್ಲಿ ಪ್ರಸಾರಿಸುವುದು.[೨]
ಶ್ರೀಪಾದರಾಯ, ವ್ಯಾಸತೀರ್ಥ, ವಾದಿರಾಜತೀರ್ಥ, ಪುರಂದರ ದಾಸ ಹಾಗು ಕನಕ ದಾಸರಂತಹ ಪ್ರಖ್ಯಾತ ಹಿಂದೂ ತತ್ವಜ್ಞಾನಿಗಳು, ಕವಿಗಳು ಹಾಗು ವಿದ್ವಾಂಸರು ಈ ಸಮಯದಲ್ಲಿ ಮುಖ್ಯ ಪಾತ್ರ ವಹಿಸಿದರು.[೨] ಈ ಚಳುವಳಿ ಕನ್ನಡನಾಡಿನಲ್ಲಿ ಆರಂಭವಾಗಿ ನಂತರ ದಕ್ಷಿಣ ಭಾರತದ ಬೇರೆಡೆ ಹಬ್ಬಿದರೂ, ಇದು ಮುಂಚಿನ ಭಕ್ತಿ ಚಳುವಳಿಗಳಾದ ಬಸವಣ್ಣನವರು ೧೨ನೆಯ ಶತಮಾನದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸಿದ್ದ ವೀರಶೈವ ಚಳುವಳಿ (ಕನ್ನಡದ ವಚನ ಸಾಹಿತ್ಯ ) ಹಾಗು ತಮಿಳು ನಾಡಿನ ಆಳ್ವಾರ್ ಸಂತರ ೧೦ ನೆಯ ಶತಮಾನದ ಚಳುವಳಿಗಳ ಫಲ.[೩][೪] ಮುಂದೆ, ವಲ್ಲಭಾಚಾರ್ಯ ಗುಜರಾತ್‌ನಲ್ಲಿ ಹಾಗು ಗುರು ಚೈತನ್ಯ ಮಹಾಪ್ರಭು ಮಧ್ವಾಚಾರ್ಯರ ಬೋಧನೆಗಳಿಂದ ಪ್ರಭಾವಿತರಾದರು. ಅವರ ಭಕ್ತರು ವಿಶ್ವಾದ್ಯಂತ ಇಸ್ಕಾನ್(ISKCON) ಚಳುವಳಿ ಶುರುಮಾಡಿದರು.[೫]
ಹರಿದಾಸರು ಸಂತರು, ಕೆಲವರು ಅಲೆದಾಡುವ ಹಾಡುಗರು, ಹಾಗು ತಮ್ಮನು ತಾವು - ಹರಿಯ ಸೇವಕರೆಂದು ಭಾವಿಸುತಿದ್ದರು. ಈ ಚಳುವಳಿ ಮುಖ್ಯವಾಗಿ ಬ್ರಾಹ್ಮಣರು ನಡೆಸಿದರೂ, ಸಮಾಜದ ಎಲ್ಲ ವರ್ಗದವರು ಇದಕ್ಕೆ ಕೊಡುಗೆಯನ್ನು ನೀಡಿದ್ದಾರೆ.[೬] ಹರಿದಾಸ ಚಳುವಳಿ ಕನ್ನಡ ಭಕ್ತಿ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದೆ.[೭]
ಹರಿದಾಸ ಚಳುವಳಿಯಾ ಮೂಲ ಸರಿಯಾಗಿ ಗುರ್ತಿಸಲಾಗದು, 9 ನೆಯ ಶತಮಾನದಲ್ಲಿ ಈ ಚಳುವಳಿ ಶುರುವಾಯಿತು ಎನ್ನಲಾಗುತದೆ. ಆದರೆ ೧೩ನೆಯ ಶತಮಾನದಲ್ಲಿ ಉಡುಪಿಯ ಮಧ್ವಾಚಾರ್ಯರ (೧೨೩೮-೧೩೧೭) ಆಶ್ರಯದಿಂದ ದಾಸ ಕೂಟ ಎಂಬ ವೈಷ್ಣವ ಭಕ್ತಿ ಚಳುವಳಿ ಕರ್ನಾಟಕದಲ್ಲಿ ಪ್ರಾರಂಭವಾಯಿತು.[೩]
ಈ ಕಾಲಮಾನದಲ್ಲಿ, ಈ ಚಳುವಳಿ ಒಂದು ಬಲಶಾಲಿ ಧಾರ್ಮಿಕ ಶಕ್ತಿಯಾಯಿತು,ಇದರಿಂದಾಗಿ ಹಿಂದೂ ಮನೋಭಾವನೆ ದಕ್ಷಿಣ ಭಾರತದಲ್ಲಿ ನವಚೈತನ್ಯಭರಿತವಾಯಿತು, ಈ ವೇಳೆ ಉತ್ತರ ಭಾರತ ಆಗಲೇ ಮುಸ್ಲಿಂ ಆಳ್ವಿಕೆಗೆ ಸಿಲಿಕಿತ್ತು. ಹರಿದಾಸರಿಗೆ ವಿಜಯನಗರ ಸಾಮ್ರಾಜ್ಯದಲ್ಲಿ ಪೋಷಣೆ ದೊರಕಿತು.[೮] ವ್ಯಾಸತೀರ್ಥ, ಕೃಷ್ಣದೇವರಾಯನ ಗುರುವೆಂದು ಭಾವಿಸಲಾಗುತ್ತದೆ.[೯][೧೦][೧೧]
ಹರಿದಾಸರು ಹಿಂದೂಧರ್ಮದ ವೈಷ್ಣವ ಭಕ್ತರು ಹಾಗು ವಿಠ್ಠಲ, ವಿಷ್ಣುವಿನ ಅವತಾರ ಹಾಗು ಕೃಷ್ಣನನ್ನು ಪುಜಿಸ್ಸುತಿದ್ದರು.[೧೨] ಹರಿದಾಸ ಚಳುವಳಿಯಲ್ಲಿ, ಮಹಾರಾಷ್ಟ್ರದ ಪಂಢರಪುರದ ಭೀಮನದಿ ತೀರದಲ್ಲಿರುವ ವಿಠ್ಠಲನಾಥ ದೇವಸ್ತಾನ, ಕರ್ನಾಟಕದ ಹಂಪಿಯಲ್ಲಿನ ವಿಠ್ಠಲ ಸ್ವಾಮಿ ದೇವಸ್ತಾನ ಹಾಗು ಆಂಧ್ರ ಪ್ರದೇಶದ ತಿರುಮಲ ಬೆಟ್ಟದಲ್ಲಿರುವ ಶ್ರೀನಿವಾಸ ದೇವಸ್ತಾನ ಅತಿ ಪವಿತ್ರವಾದ ಸ್ಥಳಗಳು.
ಹರಿದಾಸರು' ಸಾಮಾನ್ಯವಾಗಿ ಕರ್ನಾಟಕದವರಾಗಿದರು, ಕೆಲವರನ್ನು ಹೊರಿತುಪಡಿಸಿ, ಜಯತೀರ್ಥ ಮಹಾರಾಷ್ಟ್ರದ ಪಂಢರಪುರದ ಹತ್ತಿರದ ಮಂಗವೇಡೆ[೧೩] ಹಾಗು ಶ್ರೀ ನರಹರಿ ತೀರ್ಥ (ಮಧ್ವಾಚಾರ್ಯರ ಶಿಶ್ಯರು) ಇವರು ಆಂಧ್ರ ಪ್ರದೇಶ ಅಥವಾ ಒರಿಸ್ಸಾದವರು.[೧೪]
ಮಧ್ವಾಚಾರ್ಯ ಪಂಥದ ವಿಜಯನಗರ ಸಾಮ್ರಾಜ್ಯ ಕಾಲಮಾನದ ಹೆಸರುವಾಸಿ ಹರಿದಾಸರು:
ಶ್ರೀಪಾದರಾಯರು, ವ್ಯಾಸತೀರ್ಥರು ಹಾಗು ವಾದಿರಾಜತೀರ್ಥರನ್ನು "ಮೂರು ವ್ಯಾಪಕದ ಸಂತರು" (ಯತಿ ರಾಜ ತ್ರಯರು, ಸನ್ಯಾಸರಾದರು ಇವರಿಗೆ ಸಮಕಾಲೀನ ರಾಜರು ವಿಶೇಷ ಸಹಾಯವನ್ನೀಡಿದರು) ಎಂದು ಹರಿದಾಸ ಚಳುವಳಿ ಭಾವಿಸಲಾಗುತ್ತದೆ ಆದರೆ "ವೈಷ್ಣವ ಕವಿ ತ್ರಿಮೂರ್ತಿ" ಗಳ ಪಟ್ಟ ಶ್ರೀಪಾದರಾಯ, ಪುರಂದರದಾಸ ಹಾಗು ಕನಕದಾಸರದ್ದು.[೧೫]
ಹರಿದಾಸ ಚಳುವಳಿ ಕನ್ನಡ ಸಾಹಿತ್ಯ ಭಕ್ತಿ ಸಾಹಿತ್ಯದ ರೂಪದಲ್ಲಿ ಮಹತ್ವದ ಕೊಡಿಗೆ ಮಾಡಿದೆ. ಭಕ್ತಿ ಚಳುವಳಿ ಇಂದ ಹುಟ್ಟಿದ ಸಾಹಿತ್ಯವನ್ನು ದಾಸ ಸಾಹಿತ್ಯ (ಅಥವಾ ದಾಸರ ಪದಗಳು - ದಾಸರ ಸಾಹಿತ್ಯ) ಎಂದು ಕರೆಯಲಾಗುತ್ತದ್ದೆ. ಜಗನ್ನಾಥದಾಸ, ವಿಜಯ ದಾಸ ಹಾಗು ಗೋಪಾಲದಾಸ,ಕನ್ನಡ ಸಾಹಿತ್ಯದ ಬೆಳವಣಿಗೆಗೆ ದುಡಿದ ಪ್ರಸಿದ್ದ ಕವಿಗಳು .[೧೬][೧೭]
ಇವರ ಲೇಖನಗಳನ್ನು ಮೂರು ಬಾಗದಲ್ಲಿ ವಿಂಗಡಿಸಬಹುದು:
ಪ್ರತಿಯೊಬ್ಬ ಹರಿದಾಸ ನು ಪ್ರತ್ಯೇಕವಾದ ಅಂಕಿತ ನಾಮ ದಿಂದ ಆತನ ಕಾವ್ಯವನ್ನು ಅಂಕಿತ ಗೊಳಿಸುತ್ತಿದ್ದರು . ಕೆಲವು ಪ್ರಖ್ಯಾತ ಹರಿದಾಸರ ಅಂಕಿತ ನಾಮಗಳು ಹೀಗಿವೆ:[೧೮]
ಹರಿದಾಸರು | ಕಾಲ (ಕ್ರೀಸ್ತುಶಕ) |
ಅಂಕಿತ ನಾಮ | ಟಿಪ್ಪಣಿ |
---|---|---|---|
ನರಹರಿತೀರ್ಥರು | ೧೩೨೪-೧೩೩೩ | ನರಹರಿ ರಘುಪತಿ | |
ಶ್ರೀಪಾದರಾಯರು | ೧೪೦೪-೧೫೦೨ | ರಂಗ ವಿಠ್ಠಲ | |
ವ್ಯಾಸತೀರ್ಥರು | ೧೪೬೦-೧೫೩೯ | ಶ್ರೀ ಕೃಷ್ಣ | |
ವಾದಿರಾಜತೀರ್ಥರು | ೧೪೮೦-೧೬೦೦ | ಹಯವದನ | |
ರಾಘವೇಂದ್ರತೀರ್ಥರು | ೧೫೯೫-೧೬೭೧ | ಧೀರ ವೇಣು ಗೋಪಾಲ | |
ಪುರಂದರದಾಸರು | ೧೪೮೪-೧೫೬೪ | ಪುರಂದರ ವಿಠ್ಠಲ | |
ಕನಕದಾಸರು | ೧೫೦೮-೧೬೦೬ | ಕಾಗಿನೆಲೆಯಾದಿ ಕೇಶವರಾಯ | |
ವಿಜಯದಾಸರು | ೧೬೮೨-೧೭೫೫ | ವಿಜಯ ವಿಠ್ಠಲ | |
ಗೋಪಾಲದಾಸರು | ೧೭೨೨-೧೭೬೨ | ಗೋಪಾಲ ವಿಠ್ಠಲ | |
ಹೆಳವನಕಟ್ಟೆ ಗಿರಿಯಮ್ಮ | ೧೮ನೆಯ ಶತಮಾನ | ಹೆಳವನಕಟ್ಟೆ ರಂಗ | |
ಜಗನ್ನಾಥದಾಸರು | ೧೭೨೭-೧೮೦೯ | ಜಗನ್ನಾಥ ವಿಠ್ಠಲ | |
ಕಾಖಂಡಕಿ ಮಹಿಪತಿದಾಸರು | ೧೬೧೧-೧೬೮೧ | ಮಹಿಪತಿ | |
ಪ್ರಸನ್ನ ವೆಂಕಟದಾಸರು | ೧೬೮೦-೧೭೫೨ | ಪ್ರಸನ್ನ ವೆಂಕಟ | |
ವೇಣುಗೋಪಾಲದಾಸರು | ೧೮ನೆಯ ಶತಮಾನ | ವೇಣುಗೋಪಾಲ ವಿಠ್ಠಲ | |
ಮೋಹನದಾಸರು | ೧೮ನೆಯ ಶತಮಾನ | ಮೋಹನ ವಿಠ್ಠಲ | |
ನೆಕ್ಕರ ಕೃಷ್ಣದಾಸರು | ೧೮ನೆಯ ಶತಮಾನ | ವರಾಹ ತಿಮ್ಮಪ್ಪ | |
ಗುರುಗೋವಿಂದದಾಸರು | - | - |
ಹರಿದಾಸ ಚಳುವಳಿ ಕರ್ನಾಟಕ ಸಂಗೀತ ಬೆಳವಣಿಗೆಯನ್ನು ಹಿಂದೂಸ್ತಾನಿ ಇಂದ ಬೇರೆ ಒಂದು ಪ್ರತ್ಯೇಕ ರೀತಿಯಲ್ಲಿ ಮುದುವರಿಸಿತು, ಇದರಿಂದಾಗಿ ಭಾರತದ ಶಾಸ್ತ್ರೀಯ ಸಂಗೀತ ಒಂದು ನವೋದಯವಾಯಿತು. ಪುರಂದರ ದಾಸರನ್ನು (ಕರ್ನಾಟಕ ಸಂಗೀತ ಪಿತಾಮಹ )ಎನಲಾಗುತ್ತದ್ದೆ..[೧೯][೨೦][೨೧] ಅವರ ಕರ್ಯಗಳು ಈ ವಿಂಗಡಣೆಯಲ್ಲಿ ಬರುತ್ತದೆ: ಪದಗಳು , ಕೃತಿ , ಉಗಾಭೋಗ , ಸುಳಾದಿ , ವ್ರುತ್ತನಾಮ , ದಂಡಕ , ತ್ರಿಪದಿ (ಮೂರು ಸಾಲಿನ ಕಾವ್ಯ), ಷಟ್ಪದಿ , ಸಾಂಗತ್ಯ "ಕೋಲಾಟ ಪಂಕಿನ"[೨೨] ಹಾಗು ರಗಳೆ .
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help); Unknown parameter |coauthors=
ignored (|author=
suggested) (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite book}}
: Check date values in: |year=
(help)CS1 maint: year (link){{cite web}}
: Check date values in: |accessdate=
(help){{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)