ವೈಯುಕ್ತಿಕ ಮಾಹಿತಿ | ||
---|---|---|
ಜನನ | ೫ ಜುಲೈ ೧೯೮೦ | |
ಎತ್ತರ | 1.68 m (5 ft 6 in) | |
Sport | ||
ದೇಶ | ಭಾರತ | |
ಕ್ರೀಡೆ | ಅಥ್ಲೆಟಿಕ್ಸ್ | |
ಸ್ಪರ್ಧೆಗಳು(ಗಳು) | ಡಿಸ್ಕಸ್ ಥ್ರೋ ಶಾಟ್ ಪುಟ್ | |
ತರಬೇತುದಾರರು | ಪರ್ವೀರ್ ಸಿಂಗ್ | |
Achievements and titles | ||
ವೈಯಕ್ತಿಕ ಪರಮಶ್ರೇಷ್ಠ | Shot Put: 15.75 (ಬೆಂಗಳೂರು ೨೦೦೨) Discus Throw: 63.05 m (ಕೈವ್ ೨೦೦೪) | |
ಪದಕ ದಾಖಲೆ
| ||
Updated on ೧೦ July ೨೦೧೩. |
ಹರ್ವಂತ್ ಕೌರ್ (ಜನನ ೫ ಜುಲೈ ೧೯೮೦) ಒಬ್ಬ ಭಾರತೀಯ ಡಿಸ್ಕಸ್ ಎಸೆತಗಾರ್ತಿ ಮತ್ತು ಶಾಟ್ ಪುಟರ್. ಇವರು ೨೦೦೨ ರ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. [೧] ೨೦೦೩ ರ ಏಷ್ಯನ್ ಚಾಂಪಿಯನ್ಶಿಪ್ಗಳಲ್ಲಿ ನಾಲ್ಕನೇ ಸ್ಥಾನ ಮತ್ತು ೨೦೦೬ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಏಳನೇ ಸ್ಥಾನ ಪಡೆದರು. ಜೊತೆಗೆ ಅವರು ೨೦೦೪ ರ ಒಲಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು ಮತ್ತು ಅರ್ಹತಾ ಸುತ್ತುಗಳಲ್ಲಿ ೧೩ ನೇ ಶ್ರೇಯಾಂಕವನ್ನು ಪಡೆದರು. ಆಕೆಯ ವೈಯಕ್ತಿಕ ಕೋಚ್ ಪರ್ವೀರ್ ಸಿಂಗ್. ೨೦೧೦ ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದರು. [೨]
ಆಕೆಯ ವೈಯಕ್ತಿಕ ಅತ್ಯುತ್ತಮ ಎಸೆತವು ೬೩.೦೫ ಮೀಟರ್ಗಳು. ಆಗಸ್ಟ್ ೨೦೦೪ ರಲ್ಲಿ ಕೈವ್ನಲ್ಲಿ ಸಾಧಿಸಲಾಯಿತು. ಇವರು ೨೦೦೮ ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದರು. ಆದರೆ ಫೈನಲ್ಗೆ ತಲುಪಲು ವಿಫಲರಾದರು ಮತ್ತು ಅರ್ಹತಾ ಪಂದ್ಯಗಳಲ್ಲಿ ೫೬.೪೨ ಮೀ ಎಸೆಯುವ ಮೂಲಕ ೧೭ ನೇ ಶ್ರೇಯಾಂಕವನ್ನು ಪಡೆದರು.
[[ವರ್ಗ:ಜೀವಂತ ವ್ಯಕ್ತಿಗಳು]]