'ಹರ್ಷ ಭೋಗಲೆ', (Marathi: हर्ष भोगले)(೧೯, ಜುಲೈ, ೧೯೬೧) ಭಾರತದ ಟೆಲೆವಿಷನ್ ಚಾನಲ್ ನ ಒಬ್ಬ ಹೆಸರಾಂತ 'ಕಾಮೆಂಟೇಟರ್' ಹಾಗೂ 'ಪತ್ರಿಕೋದ್ಯಮಿ'. ಅವರು 'ಹೈದರಾಬಾದಿನಲ್ಲಿ ನೆಲೆಸಿದ ಮರಾಠಿ ಮಾತಾಡುವ ಪರಿವಾರವೊಂದರಲ್ಲಿ ಜನ್ಮವೆತ್ತಿದರು.' ಟೆಲಿವಿಷನ್ ವಲಯದಲ್ಲಿ ಸಮರ್ಥವಾಗಿ ಹಾಗೂ ಸಮಗ್ರವಾದ ಕ್ರಿಕೆಟ್ ಆಟದ ವಿಧಿ-ಧಾನಗಳನ್ನು ಅತ್ಯಂತ ರೋಚಕವಾಗಿ ಸತತವಾಗಿ ತಪ್ಪದೆ ಭಾಗವಹಿಸಿ, ಕ್ರೀಡಾಪ್ರಿಯರ ಮನರಂಜನೆ ಮಾಡುತ್ತಿರುವ ಭಾರತೀಯರಲ್ಲಿ ಮೊದಲಿಗರೆಂದು ಹೆಸರು ಮಾಡಿದ್ದಾರೆ.
'ಹರ್ಷ ಭೋಗಲೆ' ರ ತಂದೆಯವರು, ಫ್ರೆಂಚ್ ಭಾಷಾ-ಪ್ರಾಧ್ಯಾಪಕ, 'ಎ.ಡಿ. ಭೋಗ್ಲೆ' ಮತ್ತು ಅವರ ತಾಯಿ, 'ಶಾಲಿನಿ ಭೋಗ್ಲೆ', ಮನಃಶಾಸ್ತ್ರದಲ್ಲಿ ಪ್ರಾಧ್ಯಾಪಕಿ. 'ಪಬ್ಲಿಕ್ ಶಾಲೆ'ಯಲ್ಲಿ ತಮ್ಮ ವ್ಯಾಸಂಗವನ್ನು ಶುರುಮಾಡಿದರು. ಹೈದರಾಬಾದ್ ನ 'ಉಸ್ಮಾನಿಯ ವಿಶ್ವವಿದ್ಯಾಲಯ'ದಲ್ಲಿ 'ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ' ಗಳಿಸಿದರು. 'ಅಹ್ಮದಾಬಾದ್' ನ 'ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಮ್ಯಾನೇಜ್ ಮೆಂಟ್' ನಲ್ಲಿ ಪದವಿಯೋತ್ತರ ವ್ಯಾಸಂಗ. ಹರ್ಷರವರು, ಜಾಹಿರಾತು ಸೇವೆಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು.(an advertising agency) ತಮ್ಮ ೧೯ ನೆಯ ವಯಸ್ಸಿನಲ್ಲೇ ಹೈದರಾಬಾದಿನ, 'ಆಲ್ ಇಂಡಿಯ ರೇಡಿಯೊ' ನಲ್ಲಿ ಕಾಮೆಂಟರಿ ಕೊಡುವ ಕೆಲಸವನ್ನು ಹಿಡಿದಿದ್ದರು. ೧೯೯೧-೯೨ ರ ಸಾಲಿನಲ್ಲಿ 'ಆಸ್ಟ್ರೇಯದ ರೇಡಿಯೊ ನಿಲಯ' ಅವರಿಗೆ ಕರೆಕಳಿಸಿ ನೌಕರಿಯನ್ನು ಪ್ರದಾನ ಮಾಡಿತು. '೧೯೯೨ ರ ಸಾಲಿನ ವಿಶ್ವಕಪ್ ಕ್ರಿಕೆಟ್ 'ಮ್ಯಾಚಿನ ವಿವರಣೆಯನ್ನು ಕೊಡಲು, 'ವಿದೇಶದಲ್ಲಿ ಆಹ್ವಾನಿತರಾದ ಪ್ರಥಮ ಭಾರತೀಯ'ರೆಂದು ಇಂದಿಗೂ ಪ್ರಸಿದ್ಧರಾಗಿದ್ದಾರೆ.(Australian Broadcasting Corporation)
ಭಾರತ ಆಸ್ಟ್ರೇಲಿಯದಲ್ಲಿ ಆಡಿದ ಕ್ರಿಕೆಟ್ ಆಟಗಳನ್ನು ಪ್ರಸಾರಮಾಡುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದರು.(ABC Radio Grandstand) ಮುಂದೆ ಬಿ.ಬಿ,ಸಿ ನಲ್ಲಿಯೂ ೮ ವರ್ಷಗಳ ಕಾಲ ಕೆಲಸ ಮಾಡಿದರು. ೧೯೯೬ ರಲ್ಲಿ, ಅವರ ನಿಲಯದ ಕ್ರೀಡೆಗಳನ್ನು 'ಪರಿಚಯಿಸಿ ಪೇಷ್ ಮಾಡುವ ಕಾರ್ಯಕರ್ತರ ತಂಡದಲ್ಲಿ ಒಬ್ಬರಾಗಿ', ೧೯೯೬ ಮತ್ತು ೧೯೯೯ ವಿಶ್ವಕಪ್ ನಡೆದ ಸಮಯದಲ್ಲಿ, ಭಾರತದ ಪ್ರಖ್ಯಾತ-ಕ್ರೀಡಾ ಚಾನಲ್, 'ಇಎಸ್ಪಿಯೆನ್ ಪ್ರಸಾರ ಕಾರ್ಪೊರೇಶನ್' ನ 'ಕ್ರೀಡಾವಿಭಾಗದ ಒಬ್ಬ ಸಮರ್ಥ ಕಾರ್ಯಕ್ರಮ ನಿವೇದಕರಾಗಿ' ೧೯೯೫, ರಿಂದ ಮುಂದೆ ಕ್ರಿಕೆಟ್ ಚಾಲನೆಯಲ್ಲಿರುವ ಕ್ರಿಕೆಟ್ ಆಟದ ಪ್ರತಿ-ಕ್ಷಣ-ಕ್ಷಣದ ವಿವರಗಳನ್ನು ಕೊಡಲು ಸೇರಿಕೊಂಡರು. (ESPN STAR Sports) ಭಾಗವಾಗಿ (Few Good Men}' commentary team that included Ravi Shastri and Sunil Gavaskar-along with Alan Wilkins,Geoff Boycott,Navjot Singh Sidhu, ಆನಂತರ, ಐಯಾನ್ ಚಾಪೆಲ್ ಸೇರಿದರು.