ಹಿಂದೂ ಧರ್ಮದಲ್ಲಿ, ಹಿರಣ್ಯಾಕ್ಷನು ಒಬ್ಬ ಅಸುರನಾಗಿದ್ದನು ಮತ್ತು ದಿತಿ ಹಾಗೂ ಕಶ್ಯಪರ ಪುತ್ರ.[೧]
ಕಶ್ಯಪ ಒಬ್ಬ ಪ್ರಾಚೀನ ಋಷಿಯಾಗಿದ್ದನು. ಪ್ರಸ್ತುತ ಮನ್ವಂತರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬನು; ಅತ್ರಿ, ವಶಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ಭಾರದ್ವಾಜರು ಉಳಿದವರು .
ಅವನು ದೇವತೆಗಳು, ಅಸುರರು, ನಾಗರು ಮತ್ತು ಸಮಸ್ತ ಮಾನವಕುಲದ ತಂದೆ. ಅವನು ಅದಿತಿಯನ್ನು ಮದುವೆಯಾಗಿ ಆದಿತ್ಯನಾದ ಅಗ್ನಿಗೆ ಜನ್ಮವಿತ್ತನು. ಅವನ ಎರಡನೇ ಹೆಂಡತಿ ದಿತಿಯಿಂದ ದೈತ್ಯರು ಜನ್ಮತಾಳಿದರು. ದಿತಿ ಹಾಗೂ ಅದಿತಿಯರು ರಾಜ ದಕ್ಷ ಪ್ರತಾಪತಿಯ ಮಕ್ಕಳು. ಇವರಿಬ್ಬರು ಶಿವನ ಪತ್ನಿ ಸತಿಯ ಸೋದರಿಯರು.
ದಿತಿಯು ಸಂಜೆ ವೇಳೆಯಲ್ಲಿ ಗರ್ಭಧರಿಸಿದಳು, ಮತ್ತು ತನ್ನ ಗರ್ಭದಲ್ಲಿ ಆ ಮಗುವನ್ನು ನೂರು ವರ್ಷ ಹೊತ್ತಳು. ಈ ಮಗುವೇ ಹಿರಣ್ಯಾಕ್ಷ.
ಕಾಲ ಮತು ಸೃಷ್ಟಿಯ ತುಂಬಾ ಮೊದಲು, ಹಿಂದೂ ದೇವತೆ ವಿಷ್ಣು ಒಂದು ಬೃಹತ್ ಸಮುದ್ರದ ತೀರದಲ್ಲಿ ಇರುತ್ತಿದ್ದನು. ಅದೇ ತೀರದಲ್ಲಿ ಎರಡು ಬೆಳ್ಳಕ್ಕಿಗಳೂ ಗೂಡು ಕಟ್ಟಿಕೊಂಡಿದ್ದವು. ಪ್ರತಿ ವರ್ಷ ಹೆಣ್ಣು ಬೆಳ್ಳಕ್ಕಿ ಸಮುದ್ರದ ತೀರದಲ್ಲಿ ಮೊಟ್ಟೆಗಳನ್ನು ಇಡುತ್ತಿತ್ತು. ಆದರೆ ಸಮುದ್ರದ ನೀರು ರಭಸದಿಂದ ಒಳನುಗ್ಗಿ ಮೊಟ್ಟೆಗಳನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಹೆಣ್ಣು ಬೆಳ್ಳಕ್ಕಿಯು ಪ್ರತಿ ವರ್ಷ ತನ್ನ ಮೊಟ್ಟೆಗಳನ್ನು ಮತ್ತಷ್ಟು ದೂರ ಇಡುತ್ತಿತ್ತು ಆದರೆ ಸಮುದ್ರದ ನೀರು ಪ್ರತಿ ಬಾರಿಯೂ ಮೊಟ್ಟೆಗಳನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ತಮ್ಮ ನಷ್ಟದಿಂದ ಬೆಳ್ಳಕ್ಕಿಗಳು ದುಃಖಿತಗೊಂಡವು. ಹತಾಶೆಯಲ್ಲಿ, ತಮ್ಮ ನೆರವಿಗೆ ಬರುವಂತೆ, ಮಹಾ ಸಂರಕ್ಷಕ ವಿಷ್ಣುವಿಗೆ ಮೊರೆಯಿಟ್ಟವು. ಅವುಗಳ ದುರದೃಷ್ಟದ ಪರಿಸ್ಥಿತಿ ಬಗ್ಗೆ ವಿಷ್ಣುಗೆ ಕರುಣೆ ಸಹಾನುಭೂತಿ ಅನಿಸಿತು. ಅವನು ತನ್ನ ಬಾಯಿ ತೆರೆದು ಬೃಹತ್ ಗುಟುಕಿನಲ್ಲಿ ಸಮುದ್ರವನ್ನು ನುಂಗಿದನು. ಎಲ್ಲಿ ಸಮುದ್ರವಿತ್ತೊ, ಈಗ ಹೊಸದಾಗಿ ಸೃಷ್ಟಿಗೊಂಡ ತಾಯಿಯಿತ್ತು (ಭೂಮಿ). ಅಷ್ಟು ಬೃಹತ್ ಸಮುದ್ರವನ್ನು ನುಂಗಿದ ಸಾಹಸದಿಂದ ವಿಷ್ಣು ಬಹಳ ಆಯಾಸಗೊಂಡಿದ್ದನು. ಅವನು ವಿಶ್ರಮಿಸಲು ಅಡ್ಡಾದನು ಮತ್ತು ಶೀಘ್ರದಲ್ಲೇ ಗಾಢ ನಿದ್ರೆಗೆ ಹೋದನು. ಅಸುರ ಹಿರಣ್ಯಾಕ್ಷನು ಹತ್ತಿರದಲ್ಲೆ ಅವಿತಿದ್ದನು. ವಿಷ್ಣು ಮಲಗಿದ್ದನ್ನು ನೋಡಿ, ಅವನು ಅವಕಾಶ ಬಳಸಿಕೊಂಡು ರಕ್ಷಣಾರಹಿತ ಭೂದೇವಿಯ ಮೇಲೆ ಕ್ರೂರವಾಗಿ ದಾಳಿ ಮಾಡಿದನು. ಅವನ ಕ್ರೌರ್ಯ ಎಷ್ಟು ಭಾರಿ ಪರಿಮಾಣದಲ್ಲಿತ್ತೆಂದರೆ ಅವಳ ಅವಯವಗಳು ಮುರಿದು ಮೇಲೆ ನೂಕಲ್ಪಟ್ಟವು. ಆಕಾಶದ ಕಡೆ ಚಾಚಿಕೊಂಡ ಈ ಮುರಿದ ಅವಯವಗಳು ಹಿಮಾಲಯವನ್ನು ರಚಿಸಿದವು.
ಹಿರಣ್ಯಾಕ್ಷನು ಭೂಮಿಯನ್ನು ಸಾಗರದ ತಳಕ್ಕೆ ತೆಗೆದುಕೊಂಡು ಹೋದಾಗ ವಿಷ್ಣುವು ಅವನನ್ನು ಸಂಹರಿಸಿದನು.