ಹಿರೇಕೇರೂರು

ಮಲೆನಾಡಿನ ಒಂದು ಭಾಗವಾದ ಹಿರೇಕೆರೂರು,'ಹಾವೇರಿ ಜಿಲ್ಲೆ'ಯ ಕಟ್ಟಕಡೆ ಗ್ರಾಮ. ಜಿಲ್ಲಾ ಕೇಂದ್ರ ಹಾವೇರಿಯಿಂದ ೫೦ ಕಿ. ಮೀ. ದೂರದಲ್ಲಿದೆ. ಪ್ರಾಚೀನಕಾಲದ ಶಾಸನಗಳಲ್ಲಿ ಪಿರಿಯ ಕೆರೆಯೂರು ಮಹಾತಟಾಕ-ಗ್ರಾಮವೆಂದು ಉಲ್ಲೇಖಗೊಂಡಿತ್ತು. ಹಿಂದೆ ಬನವಾಸಿ ೧೨,೦೦೦ ನಾಡಿಗೆ ಸೇರಿದ್ದ 'ಪಿರಿಯಕೆರೆಯೂರು' ೧೨ ಹಳ್ಳಿಗಳ ಆಡಳಿತ ಕೇಂದ್ರವಾಗಿತ್ತು. ಸಾವಿರ ಮಹಾರಾಜರುಗಳನ್ನು ಒಳಗೊಂಡ ಮಹಾ ಅಗ್ರಹಾರ-ಗ್ರಾಮವಾಗಿತ್ತು. ಶಾಸನಗಳಲ್ಲಿ ಉಲ್ಲೇಖಿಸಿರುವ ತೆಂಕಣ್ಣ ಅಯ್ಯಾವಳೆ ಪಿರಿಯ ಕೆರೂರುಯೆಂದೇ ಪ್ರಸಿದ್ಧಿಹೊಂದಿತ್ತು. 'ಪ್ರಮುಖ ವಾಣಿಜ್ಯ ಕೇಂದ್ರ'ವೂ ಹೌದು. ಇಲ್ಲಿ ಬಾಳಂಬೀಡದಲ್ಲಿ ಜಗತ್ಪ್ರಸಿದ್ಧ ಭಗವಾನ್ ಸರಹುನಾಥ್ ಮಂದಿರ ಇದ್ದಿರುವುದು ಹೊಸ ಶೋಭೆಯನ್ನು ತಂದಿದೆ.

ಪ್ರಸಿದ್ದ ಮಂದಿರಗಳು

[ಬದಲಾಯಿಸಿ]
  • ಭಗವಾನ್ ಹರಿಹರ ಸರಹುನಾಥ್ ಮಂದಿರ (Lord Harihar Sarahunaath Temple)
  • ದುರ್ಗಾದೇವಿ ಮಂದಿರ
  • ವಿಷಕಂಠೇಶ್ವರ ಮಂದಿರ

ಹಲವಾರು ಶಾಸನಗಳ ಬೀಡು

[ಬದಲಾಯಿಸಿ]

ಈ ಊರಿನಲ್ಲಿ ಇದುವರೆವಿಗೆ, 'ರಾಷ್ಟ್ರಕೂಟ', 'ಕಲ್ಯಾಣದ ಚಾಲುಕ್ಯ' ಹಾಗೂ 'ವಿಜಯನಗರದ ಅರಸರ' ೧೭ ಶಾಸನಗಳು ವರದಿಯಾಗಿವೆ. ಇವುಗಳಲ್ಲಿ ’ಗೋದನ’ಮಾಡಿದ ವಿಷಯ-ಹೆಗ್ಗೇರಿಗೆ ನೀಡಿದ ದಾನಗಳ ವಿವರಗಳು ಗೊತ್ತಾಗುತ್ತವೆ. ಗೋಗ್ರಹಣದಲ್ಲಿ ಹೋರಡಿ ಮಡಿದ ವೀರರುಗಳು ಮತ್ತು ಹುಲಿಯೊಂದಿಗೆ ಕಾದುತ್ತಾ ಮಡಿದ ನಾಯಕನ ವಿಷಯವನು ಇಲ್ಲಿಯ ಶಾಸನ ಧಾಖಲಿಸುತ್ತದೆ.

ಭೈರನಪಾದ

ಭೈರನಪಾದ ತುಂಗಾಭದ್ರಾ ನದಿಯ ದಡದ ಮೇಲಿದೆ. ಗ್ರಾಮಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ಭೈರವೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣವಾಯಿತು. ಆದರೆ ಮೂಲ ಭೈರೇಶ್ವರ ಅತ್ಯಂತ ಪ್ರಾಚೀನವಾದದ್ದು. ಈ ಭೈರವೇಶ್ವರ ವೀರಭದ್ರನ ಸೋದರ ಎಂದು ಹೇಳಲಾಗಿದೆ.

ಪ್ರಾಚೀನವಾದ,ಹೆಗ್ಗೇರಿಕೆರೆಯಿದೆ

[ಬದಲಾಯಿಸಿ]

'ಹಿರೇಕೇರೂರಿ'ನ ಪ್ರಮುಖ ಆಕರ್ಷಣೆಯೆಂದರೆ, ಇದು ಸಾವಿರವರ್ಷಗಳಷ್ಟು ಪ್ರಾಚೀನವಾದ ಹೆಗ್ಗೇರಿಕೆರೆ ಕೇವಲ ೨ ಕಿ. ಮೀ. ದೂರದಲ್ಲಿದೆ. ಅದರ ಬಳಿಯಲ್ಲೇ ಸುಂದರ ದುರ್ಗಾ ದೇವಸ್ಥಾನವಿದೆ. ಮರಾಠಿಗರ ಆಳ್ವಿಕೆಯಲ್ಲಿ ಈ ದೇವಿಗೆ ಮರಾಠಿಗರು, ಆಭರಣಗಳನ್ನು ದಾನವಾಗಿ ನೀಡಿದ ಉದಾಹರಣೆಗಳಿವೆ. ಹೆಗ್ಗೇರಿಗೆ ಹೋಗುವ ದಾರಿಯಲ್ಲಿ, ತೋಟದ ವೀರಣ್ಣ ಹಾಗೂ ಜನಾರ್ಥದನ ದೇವಸ್ಥಾನಗಳಿವೆ. ಇದಲ್ಲದೆ ಊರಿನ ಒಳಗೆ ಹೋದರೆ, 'ಹನುಮಂತ', 'ಬಸವಣ್ಣ', 'ವೀರಭದ್ರ', 'ಕೋಟೆ ದುರ್ಗವ್ವ', 'ದತ್ತಾತ್ರೇಯ' ಮುಂತಾದ ದೇವರುಗಳ ಮಂದಿರಗಳಿವೆ. ಬ್ರಹ್ಮೇಶ್ವರ ಗುಡಿಯ ಸಮೀಪದಲ್ಲಿ ರಾಷ್ಟ್ರಕೂಟರಾಜರ ಕಾಲದ 'ಬೃಹತ್ ವೀರಗಲ್ಲು’ ಇದೆ. 'ಆಡಿಲ್ ಶಾ' ಕಾಲಕ್ಕೆ ಸೇರಿದ 'ಜಾಮಿಯ ಮಸೀದಿ,' ಮತ್ತು 'ನೂರಾನಿ ಮಸೀದಿ'ಗಳಿವೆ.

'ಸರ್ವಜ್ಞನ ಜನ್ಮಸ್ಥಳ'

[ಬದಲಾಯಿಸಿ]

'ಬೀಜಗಳ ಕ್ರಾಸ್ಸ್' ಗೆ ಇಲ್ಲಿಯ ವಾತಾವರಣ ತುಂಬ ಉತ್ತಮವಾದುದು. ಹಾಗಾಗಿ ಇಲ್ಲಿ ಹೆಚ್ಚಿನ ಜನರು ಇದನ್ನು ಅವಲಂಬಿಸಿದ್ದಾರೆ. ತರಕಾರಿ ಬೆಳೆಗಳನ್ನು ಸಹ ಇಲ್ಲಿ ಬೆಳೆಯಲಾಗುತ್ತದೆ.'ಸರ್ವಜ್ಞನ ಜನ್ಮಸ್ಥಳ',ಅಬಲೂರು ಹಿರೇಕೇರೂರಿಗೆ ತುಂಬ ಹತ್ತಿರ, ಮತ್ತು ಸರ್ವಜ್ಞ ಬಾಳಿ ಬದುಕಿದ್ದ ಮಾಸೂರು ಹಿರೇಕೇರೂರಿನಿಂದ ಕೇವಲ ೧೨ ಕಿ.ಮೀ ದೂರದಲ್ಲಿದೆ.

ಅಬಲೂರಿನಿಂದ ೨ ಕಿ.ಮೀ ಅಂತರದಲ್ಲಿ ಶ್ರೀರಾಮನಕೊಪ್ಪ ಎಂಬ ಊರು ಇದೆ ಅಲ್ಲಿ ರಾಮ ಮಂದಿರ ಇದೆ.ಅಲ್ಲಿ ಶ್ರೀ ರಾಮನು ವನವಾಸ ಸಂದರ್ಭದಲ್ಲಿ ವಿಶ್ರಾಂತಿ ಪಡೆದಿದ್ದ ಎಂಬ ಪ್ರತಿತಿ ಇದೆ.ಮತ್ತು ಇಲ್ಲಿ ಬಸವೇಶ್ವರ ದೇವಾಲಯ ಮತ್ತು ಆಂಜನೇಯ ಸ್ವಾಮಿ ದೇವಾಲಯ ಇದೆ.ಮತ್ತು ಇಲ್ಲಿ ಯುಗಾದಿ ಅಮವಾಸ್ಯೆ ಮುಗಿದ ೫ನೇ ದಿನದಂದು ಶ್ರೀ ಬಸವೇಶ್ವರ ಜಾತ್ರೆಯನ್ನು ಆಚರಿಸುತ್ತಾರೆ.


ಶ್ರೀ ಶನೇಶ್ವರ ದೇವಸ್ಥಾನ ಗುಂಡಗಟ್ಟಿ ಗುಂಡಗಟ್ಟಿ ಗ್ರಾಮ ಹಿರೇಕೆರೂರು ನಿಂದ ೮ ಕಿ ಮೀ ದೂರದಲ್ಲಿದೆ ಹಾಗೂ ಇಲ್ಲಿಯ ಶ್ರೀ ಶನೇಶ್ವರ ಸ್ವಾಮಿಯ ದೇವಸ್ಥಾನ ತುಂಬಾ ಪ್ರಸಿದ್ದವಾದದ್ದು. ಪ್ರತಿ ಶನಿವಾರ ಮತ್ತು ಅಮವಾಸ್ಯೆ ಯಂದು ಶ್ರೀ ಶನೇಶ್ವರ ದೇವರ ಪಾಲಕಿ ಉತ್ಸವ ಜರುಗುತ್ತದೆ. ಭಕ್ತಾಧಿಗಳು ಬಂದು ಹೋಗಲು ಹಿರೇಕೆರೂರು ಮತ್ತು ಮಾಸೂರು ನಿಂದ ಬಸ್ಸುಗಳ ಸೌಕರ್ಯವಿದೆ. ಪ್ರತಿ ಶನಿವಾರ ಮತ್ತು ಅಮವಾಸ್ಯೆ ಯಂದು ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಇರುತ್ತದೆ.

durga matheya jathre kooda ಹಳೆ ವೀರಾಪುರ ಗ್ರಾಮ ಹಿರೇಕೇರೂರು. ನಿಂದ ೧೫ ಕೀ. ಮೀ ದೂರದಲ್ಲಿದೆ . ಈ ಗ್ರಾಮದಲ್ಲಿ ಪಿಳಲಿಮರವಿದ್ದು ಇದು ಒಂದು ಎಕರೆ ಜಾಗದಲ್ಲಿ ಆವರಿಸಿಕೊಂಡಿದೆ .ಇದರ ಕೆಳಗೆ ಗ್ರಾಮ ದೇವತೆ ಇದ್ದು ಅಮವಾಸ್ಯೆ ಯಂದು ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಇರುತ್ತದೆ. ಈ ಮರವನ್ನು ಯಾರಾದ್ರು ಕಡಿದರೆ ಜೀವನದಲ್ಲಿ ತುಂಬ ನವನ್ನು ಅನುಭವಿಸುತ್ತಾರೆ. ಮರವು ದಿನದಿನಕ್ಕೆ ಬೆಳೆಯುತ್ತಲೇ ಇದೆ.ಭಕ್ತಾಧಿಗಳು ಬಂದು ಹೋಗಲು ಹಿರೇಕೆರೂರು ಮತ್ತು ಮಾಸೂರು ನಿಂದ ಬಸ್ಸುಗಳ ಸೌಕರ್ಯವಿದೆ .