ಹುಣಸ ಮಾರನ ಹಳ್ಳಿ

ಹುಣಸ ಮಾರನ ಹಳ್ಳಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಹೋಬಳಿಯ ಒಂದು ಗ್ರಾಮ. ಬೆಂಗಳೂರು ನಗರದಿಂದ ಕೇವಲ ೨೦ ಕಿ.ಮೀ ದೂರದಲ್ಲಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ ೧೨ ಕಿ.ಮೀ. ದೂರದಲ್ಲಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ೧೫ ನಿಮಿಷಗಳ ಪ್ರಯಾಣ. ಬೆಂಗಳೂರಿನಿಂದ ಬಳ್ಳಾರಿ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ-೭ರ ಮಾರ್ಗದಲ್ಲಿದೆ. ಹುಣಸ ಮಾರನ ಹಳ್ಳಿಯು ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳ ಪಡುತ್ತದೆ.

ಸ್ಥಳೀಯ ಆಡಳಿತವನ್ನು ಹುಣಸ ಮಾರನ ಹಳ್ಳಿ ಗ್ರಾಮ ಪಂಚಾಯಿತಿಯಿಂದ ನಡೆಸಲಾಗುತ್ತಿದೆ, ಇದರ ವಾಪ್ತಿಯಲ್ಲಿ ಭಾರತಿ ನಗರ-ಹುಣಸ ಮಾರನ ಹಳ್ಳಿ, ಹೊಸ ಹಳ್ಳಿ, ಕೊಡಗಲ ಹಟ್ಟಿ ಸುಗ್ಗಟ್ಟ ಗ್ರಾಮಗಳು ಸೇರಿವೆ. ಸದರಿ ಅಧ್ಯಕ್ಷರಾಗಿ ಸತೀಶ್ ಕುಮಾರ್ ರವರು ಕಾರ್ಯ ನಿರ್ವಹಿಸುತ್ತಿದ್ದಾರೆ. ೨೦೦೧ ನಲ್ಲಿ ಈ ಹಳ್ಳಿ ೭೮೩೪ ಜನಸಂಖ್ಯೆಯನ್ನು ಹೊಂದಿತ್ತು.