ಹುಣ್ಣಿಮೆ (ಪೂರ್ಣಿಮೆ) ಪ್ರತಿ ತಿಂಗಳು ಆಕಾಶದಲ್ಲಿ ಪೂರ್ಣ ಚಂದ್ರನು ಕಾಣಿಸುವ ದಿನ (ತಿಥಿ), ಮತ್ತು ಪ್ರತಿ ತಿಂಗಳಿನಲ್ಲಿನ ಎರಡು ಚಾಂದ್ರ ಪಕ್ಷಗಳ ನಡುವಿನ ವಿಭಾಗವನ್ನು ಗುರುತಿಸುತ್ತದೆ.
ಸೂರ್ಯ ಮತ್ತು ಚಂದ್ರರು 180° ಇಂದ ಬೇರೆಯಾದಂತೆ ಕಂಡಾಗ ಹುಣ್ಣಿಮೆ ಸಂಭವಿಸುತ್ತದೆ. ಈ ಚಾಂದ್ರದಿನವನ್ನು ಹೊಸ ಆರಂಭಗಳಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.[೧] ಶುಕ್ಲ ಪಕ್ಷವು ಹುಣ್ಣಿಮೆಗಿಂತ ಮೊದಲಿನ ಪಕ್ಷ, ಮತ್ತು ಕೃಷ್ಣ ಪಕ್ಷವು ಹುಣ್ಣಿಮೆಯ ನಂತರದ ಪಕ್ಷ.