ಹುರಿಯತ್ ಕಾನ್ಫರೆನ್ಸ್ ೨೬ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಕೂಟ. ಕಾಶ್ಮೀರಿ ಪ್ರತ್ಯೇಕತಾವಾದದ ಧ್ಯೇಯವನ್ನು ನಿರೂಪಿಸಲು ಸಂಯುಕ್ತ ರಾಜಕೀಯ ಸಂಸ್ಥೆಯಾಗಿ ಇದರ ರಚನೆ ಮಾರ್ಚ್ ೯, ೧೯೯೩ ರಂದು ಆಯಿತು[೧]. ಈ ಕೂಟವನ್ನು ಐತಿಹಾಸಿಕವಾಗಿ ಪಾಕಿಸ್ತಾನವು ಸಕಾರಾತ್ಮಕವಾಗಿ ಕಂಡಿದೆ, ಏಕೆಂದರೆ ಈ ಕೂಟ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮೇಲೆ ಭಾರತ ಸರ್ಕಾರದ ಹಕ್ಕನ್ನು ಪ್ರಶ್ನಿಸಿದೆ.[೨][೩][೪]ಇದರ ಸಂಚಾಲಕರಾಗಿ ಗುಲಾಮ್ ಮುಹಮ್ಮದ್ ಸಫ಼ಿ ಜನವರಿ ೨೦೧೦ರಲ್ಲಿ ಚುನಾಯಿತರಾದರು.[೫]
ಹುರಿಯತ್‍ನ ಮೂಲಗಳು ೧೯೯೩ರ ಕಾಶ್ಮೀರ ಬಂಡಾಯದ ಹಂತಕ್ಕೆ ಗುರುತಿಸಲಾಗುತ್ತದೆ. ೧೯೮೦ರ ದಶಕದ ಕೊನೆಯ ವರ್ಷಗಳಲ್ಲಿ ಮತ್ತು ೧೯೯೦ರ ದಶಕದ ಆರಂಭದಲ್ಲಿ, ಉಗ್ರರ ಹಿಂಸೆ ಅತಿಯಾಗಿತ್ತು. ಭಾರತೀಯ ಭದ್ರತಾ ಪಡೆಗಳ ವಿರುದ್ಧದ ಸಶಸ್ತ್ರ ಹೋರಾಟದ ಆರಂಭಿಕ ಹರ್ಷೋತ್ಕರ್ಷವು ಭಾರತೀಯ ಭದ್ರತಾ ಪಡೆಗಳು ಪ್ರಾರಂಭಿಸಿದ ಪ್ರತಿ ಬಂಡಾಯ ಕಾರ್ಯಚರಣೆಗಳಿಂದ ತಗ್ಗಿತ್ತು. ಒಂದು ಉಗ್ರವಾದಿ ಸಮೂಹವಾಗಿ ಜಮ್ಮು ಮತ್ತು ಕಾಶ್ಮೀರ ವಿಮೋಚನಾ ಸಂಸ್ಥೆಯು ಅಮುಖ್ಯವಾಗಿತ್ತು ಮತ್ತು ಬದಲಿಯಾಗಿ ಪಾಕಿಸ್ತಾನದ ಐಎಸ್ಐ ನಿಂದ ಪ್ರಾಯೋಜಿತವಾದ ಹಾಗು ನಿಯಂತ್ರಿತವಾದ ಉಗ್ರಗಾಮಿ ಇಸ್ಲಾಮೀ ತಂಡಗಳ ಜಾಲ ರಚನೆಗೊಂಡಿತ್ತು.
ಹುರಿಯತ್ ಕಾನ್ಫರೆನ್ಸ್ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಒಂದು ವಿವಾದಿತ ಪ್ರದೇಶ ಮತ್ತು ಅದರ ಮೇಲೆ ಭಾರತದ ನಿಯಂತ್ರಣ ಸಮರ್ಥನೀಯವಲ್ಲ. ಅದು ಕಾಶ್ಮೀರವು ವಿಭಜನೆಯ ಮುಗಿಯದ ಕಾರ್ಯಸೂಚಿ ಎಂದು ಮತ್ತು ಜಮ್ಮು ಹಾಗೂ ಕಾಶ್ಮೀರದ ಜನರ ಆಕಾಂಕ್ಷೆಗಳ ಪ್ರಕಾರ ಅದನ್ನು ಬಗೆಹರಿಸಬೇಕು ಎಂಬ ಪಾಕಿಸ್ತಾನದ ಹಕ್ಕನ್ನು ಬೆಂಬಲಿಸುತ್ತದೆ.
ಹುರಿಯತ್ ತಾನಷ್ಟೇ ಕಾಶ್ಮೀರಿ ಜನರ ಏಕೈಕ ಪ್ರತಿನಿಧಿ ಎಂದು ತಿಳಿದುಕೊಳ್ಳುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತಿ ಬಂಡಾಯ ಕಾರ್ಯಾಚರಣೆಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯ ತೋರಿಸಿಕೊಡುವುದು ಮತ್ತು ಭಾರತೀಯ ಭದ್ರತಾ ಪಡೆಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಒಟ್ಟುಗೂಡಿಸುವುದು ಈ ಸಂಸ್ಥೆಯ ಪ್ರಾಥಮಿಕ ಪಾತ್ರವಾಗಿದೆ. ಈ ಕೂಟವು ಸತತವಾಗಿ ಭದ್ರತಾ ಪಡೆಗಳ ದೌರ್ಜನ್ಯಗಳ ಬಗ್ಗೆ ಸ್ಥಳೀಯ ಆರೋಪಗಳನ್ನು ಮುಂದುವರಿಸಿದೆ, ಮತ್ತು ಹಲವಾರು ದಾಖಲಿಸಲಾದ ಪ್ರಕರಣಗಳಲ್ಲಿ, ತನ್ನ ಪ್ರಚಾರಕ್ಕೆ ಸರಿಹೊಂದುವಂತೆ ವಾಸ್ತವಾಂಶಗಳನ್ನು ತಿರುಚಿದೆ ಎಂದು ಆಪಾದಿಸಲಾಗಿದೆ.
{{cite web}}
: Missing or empty |title=
(help)