ಹುರುಳಿ ಸಸ್ಯವು ಡೆಲಿಖೊಸ್ ಬೈಫ್ಲೊರಸ್ ಎಂಬ ಪ್ರಭೇದದಿಂದ ಕರೆಯಲ್ಪಡುತ್ತದೆ. ಈ ಸಸ್ಯ ಲೆಗ್ಯುಮಿನೆಸೀ ಅಥವಾ ಫ್ಯಾಬೇಸೀ ಕುಟುಂಬದ ಪ್ಯಾಪಿಲ್ಯೊನಿಯೆಸಿಯೇ ಉಪಕುಟುಂಬಕ್ಕೆ ಸೇರುತ್ತದೆ. ಇಂಗ್ಲಿಷಿನಲ್ಲಿ ಹಾರ್ಸ್‍ಗ್ರಾಮ್, ಹಿಂದಿಯಲ್ಲಿ ಕುಲ್‍ತಿ ಮತ್ತು ಕನ್ನಡದಲ್ಲಿ ಹುರುಳಿ ಎಂದು ಕರೆಯುತ್ತಾರೆ. ಇದು ತೆವಳಿಕೊಂಡು ಹಬ್ಬುವ ಒಂದು ಸಸ್ಯ . ಇದನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಬೆಳೆಯುತ್ತಾರೆ. ಬೀಜಗಳನ್ನು ಬೇಯಿಸಿ ಅಥವಾ ಹುರಿದು ತಿನ್ನಲಾಗುತ್ತದೆ. ಇದರ ಹಸುರು ಸೊಪ್ಪನ್ನು ಪ್ರಾಣಿಗಳಿಗೆ ಆಹಾರವಾಗಿ ಕೊಡಲಾಗುತ್ತದೆ; ಅಥವಾ ಹಸಿರು ಗೊಬ್ಬರವಾಗಿ ಉಪಯುಕ್ತವಾಗುತ್ತದೆ. ಹಳ್ಳಿಮುಕ್ಕನಿಗೆ ಹಳ್ಳಿಕಜ್ಜಾಯ ಎಂಬ ಗಾದೆಮಾತು ಕನ್ನಡದಲ್ಲಿದ್ದು ಈ ಧಾನ್ಯದಿಂದ ಕಜ್ಜಾಯ ತಯಾರಿಸುತ್ತಿದ್ದರೆಂದು ತಿಳಿದುಬರುತ್ತದೆ.
ಹುರಳಿ ಕಾಳನ್ನು ದಕ್ಷಿಣ ಭಾರತದಲ್ಲಿ ವ್ಯಾಪಕವಾಗಿ ಉಪಯೋಗಿಸಲಾಗುತ್ತದೆ . ಇದನ್ನು ಸಾರು, ಉಸಲಿ , ಚಟ್ನಿ ಪುಡಿ , ಹಪ್ಪಳ ಇತ್ಯಾದಿ ಖಾದ್ಯ ವಸ್ತು ತಯಾರಿಸಲು ಉಪಯೋಗಿಸುತ್ತಾರೆ. ಈ ಕಾಳಿನ ಖಾದ್ಯವನ್ನು ಪಂಚಕರ್ಮ ಚಿಕಿತ್ಸೆಯ ನಂತರ ಆಹಾರದಲ್ಲಿ ಬಳಸಲಾಗುತ್ತದೆ. ಈ ಹುರುಳಿ ಕಾಳಿನ ಲಾಭ ಹಾಗೂ ಪ್ರಯೋಜನದ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಬಹಳಷ್ಟಿದೆ. ಈ ಹುರುಳಿಕಾಳು ಮಧುಮೇಹ, ಹೃದ್ರೋಗ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಬೊಜ್ಜು, ಶೀತ ಮತ್ತು ಇನ್ನಿತರ ಕಾಯಿಲೆಗಳಿಗೆ ಇದು ಔಷಧಿಯಾಗಿದೆ. ಹುರುಳಿಕಾಳಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ, ಕ್ಯಾಲ್ಸಿಯಂ ಅಧಿಕವಾಗಿದೆ, ಕಡಿಮೆ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದ್ದು, ಅದು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಆಹಾರವಾಗಿದೆ. ಹಾಗಾದ್ರೆ, ನಮ್ಮ ಆರೋಗ್ಯಕ್ಕೆ ಹೇಗೆ ಇದು ಸಹಾಯಕ, ಇದರ ಪ್ರಯೋಜನ ಏನು ಎಂಬುದು ಇಲ್ಲಿದೆ ನೋಡಿ.
ಹುರುಳಿ ಕಾಳು ಫೈಬರ್ಗಳು ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ, ಇದು ತೂಕ ನಷ್ಟದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಕೊಬ್ಬು ಬರ್ನರ್ ಆಗಿ ಕೆಲಸ ಮಾಡುವ ನೈಸರ್ಗಿಕ ಗುಣಗಳನ್ನು ಹೊಂದಿದ್ದು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಬೀಜಗಳಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಹುರುಳಿಕಾಳಿನಲ್ಲಿ ಹೆಚ್ಚಿನ ಪ್ರೋಟೀನ್ ಅಂಶವು ಹಸಿವಿನ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು.ತೂಕ ನಷ್ಟಕ್ಕೆ ನೀವು ಹುರುಳಿ ಕಾಳಿನ ಪುಡಿ ಅಥವಾ ಹುರುಳಿ ಕಾಳಿನ ನೀರನ್ನು ಕುಡಿಯಬಹುದು. ಹುರುಳಿ ಕಾಳಿನ್ನು ಜೀರಿಗೆಯೊಂದಿಗೆ ಒಂದು ಲೋಟ ನೀರಿನಲ್ಲಿ ಸೇರಿಸಿ ಮತ್ತು ಖಾಲಿ ಹೊಟ್ಟೆಯಲ್ಲಿ ದಿನಕ್ಕೆ ಎರಡು ಬಾರಿ ಕುಡಿಯಿರಿಯುವುದರಿಂದ ತೂಕ ನಷ್ಟವಾಗುತ್ತದೆ.
ಹುರುಳಿ ಕಾಳು ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಈ ಹುರುಳಿ ಕಾಳು ದೇಹದಲ್ಲಿನ ಇನ್ಸುಲಿನ್ ರಚನೆಯನ್ನು ಕಡಿಮೆ ಮಾಡುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೌದು, ಹುರುಳಿ ಕಾಳು ಫೈಬರ್ ಇರುತ್ತದೆ, ಇದು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ನಾಳಗಳಲ್ಲಿ ಅಂಟಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸುತ್ತದೆ ಮತ್ತು ಅಡೆತಡೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಒಂದು ಹಿಡಿ ಹುರುಳಿ ಕಾಳು ತೆಗೆದುಕೊಂಡು ರಾತ್ರಿಯಿಡೀ ನೆನೆಸಿಡಿ. ಖಾಲಿ ಹೊಟ್ಟೆಯಲ್ಲಿ ನೀವು ದಿನಕ್ಕೆ ಎರಡರಿಂದ ಮೂರು ಬಾರಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.