ಹುಲಿಯೂರು ದುರ್ಗ | |
---|---|
ನಗರ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ರಾಮನಗರ |
ತಾಲ್ಲೂಕು | ಹುಲಿಯೂರು ದುರ್ಗ |
ಹೋಬಳಿ | ಹುಲಿಯೂರು ದುರ್ಗ |
Languages | |
• Official | Kannada |
Time zone | UTC+5:30 (IST) |
Vehicle registration | KA 42 |
ಹುಲಿಯೂರು ದುರ್ಗ : ನಗರವು ರಾಮನಗರ ಜಿಲ್ಲೆಯ ಹುಲಿಯೂರು ದುರ್ಗ ತಾಲ್ಲೂಕಿನ ಒಂದು ಹೋಬಳಿ ಕೇಂದ್ರ. ಹುಲಿಯೂರು ದುರ್ಗ ನಗರವು ಪಟ್ಟಣ ಪಂಚಾಯತಿಯನ್ನು ಹೊಂದಿರುವ ನಗರ.
ಹುಲಿಯೂರು ದುರ್ಗವು : ಒಂದು ಪಟ್ಟಣ ಪ್ರದೇಶ ಈ ಹಿಂದೆ ಕುಣಿಗಲ್ ತಾಲ್ಲೂಕಿನ ಒಂದು ಹೋಬಳಿ ಕೇಂದ್ರವಾಗಿತ್ತು. ಅದನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಕುಣಿಗಲ್ ತಾಲ್ಲೂಕು ಮತ್ತು ಹುಲಿಯೂರು ದುರ್ಗ ಹೊಬಳಿ ಜಿಲ್ಲೆಯಲ್ಲಿದೆ.
ಕುಂಭಿ ಬೆಟ್ಟ, ಹೇಮಗಿರಿ ಬೆಟ್ಟಗಳು ಊರಿನ ಸರಹದ್ದಿನಲ್ಲಿಯೇ ಇವೆ. ಊರಿನ ಪೂರ್ವ ಭಾಗವು ಕುರುಚಲು ಕಾಡಿನಿಂದ ಆವೃತ್ತ ವಾಗಿದೆ. ಐತಿಹಾಸಿಕವಾಗಿ ನೋಡಿದಾಗ ಶಿಲಾಯುಗದ ನೆಲೆಗಳು ಇಲ್ಲಿ ಕಂಡು ಬರುತ್ತವೆ. ಉಜ್ಜನಿ ಶಾಸನದಲ್ಲಿ ಹುಲಿಯೂರು ಎಂಬ ಹೆಸರು ಇದೆ. ೧೫೪೦ರ ಸುಮಾರಿನವರೆಗೂ ಹುಲಿಯೂರು ಎಂಬ ಹೆಸರೆ ಚಾಲ್ತಿಯಲ್ಲಿತ್ತು. ೧೬ನೇ ಶತಮಾನದ ಕೊನೆಯ ಭಾಗದಲ್ಲಿ ಕೆಂಪೇಗೌಡನು ಕುಂಭಿ ಬೆಟ್ಟದಲ್ಲಿ ಕೋಟೆಯನ್ನು ಕಟ್ಟಿದ ನಂತರ ಹುಲಿಯೂರು ದುರ್ಗವಾಯಿತು. ಇಲ್ಲಿ ಮಲ್ಲಿಕಾರ್ಜುನ ದೇವಾಲಯವು ಹುಲಿಯೂರು ದುರ್ಗದ ಪಕ್ಕದಲ್ಲಿ ಹೇಮಗಿರಿ ಬೆಟ್ಟದ ಶಿಖರದಲ್ಲಿದೆ.18 ಕಿ. ಮೀ ದೂರದಲ್ಲಿ ತಾವರೆಕೆರೆ ಶ್ರೀ ಕೋಟೆ ವರದಾಂಜನೇಯ ಸ್ವಾಮಿಯ ದೇವಾಲಯವಿದೆ