ಹುಲ್ಲಹಳ್ಳಿ | |
---|---|
ಮಲ್ಲೇಶ್ವರ ದೇವಸ್ಥಾನ | |
Country | India |
State | ಕರ್ನಾಟಕ |
District | ಮೈಸೂರು |
Talukas | ನೆಂಜನಗೂಡು |
ಸರ್ಕಾರ | |
• ಮಾದರಿ | Panchayat raj |
• ಪಾಲಿಕೆ | Gram panchayat |
Population (2011) | |
• Total | ೧೫,೦೦೦ |
Languages | |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
PIN | 571314 |
Telephone code | 08221(Nanjangud taluk) |
ISO 3166 code | IN-KA |
ವಾಹನ ನೋಂದಣಿ | KA |
Nearest city | Mysore |
ಜಾಲತಾಣ | karnataka |
ಹುಲ್ಲಹಳ್ಳಿ ಇದು ಭಾರತದ ಕರ್ನಾಟಕದ ರಾಜ್ಯದ ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೋಕಿನ ಒಂದು ಹೊಬಳಿ ಗ್ರಾಮ [೧] [೨]. ಇದು ಸುಂದರವಾದ ಭೂಪ್ರದೇಶಗಳಿಂದ ಆವೃತವಾದ, ನದಿ, ಕೆರೆ, ಅಣೇಕಟ್ಟು ಪುರಾತನ ದೇವಸ್ಥನಗಳಿಂದ ಸಮೃದ್ಧವಾಗಿದೆ. ಹುಲ್ಲಹಳ್ಳಿ ಕರ್ನಾಟಕದ ಸಾಂಪ್ರದಾಯಿಕ ಗ್ರಾಮೀಣ ಜೀವನದ ಒಂದು ಚಿತ್ರಣವನ್ನು ಕೂಡುತ್ತದೆ. ಈ ಪ್ರಾಂತ್ಯದಲ್ಲಿ ತೃಣಬಿಂದು ಮಹರ್ಷಿ ಎಂಬುವವರು ನೆಲೆಗೊಂಡು ತಪಸ್ಸಿನಲ್ಲಿ ನಿರತರಾಗಿದ್ದ ರಿಂದ ಈ ಪ್ರದೇಶಕ್ಕೆ ‘ತೃಣಪುರಿ’ ಎಂಬ ಹೆಸರು ಬಂದಿದೆ. ಸಂಸ್ಕೃತದಲ್ಲಿ ತಣ ಎಂದರೆ ಹುಲ್ಲು ಎಂಬ ಅರ್ಥ ಬರುತ್ತದೆ. ಹಾಗಾಗಿ ರೂಢಿಯಲ್ಲಿ ಹುಲ್ಲಹಳ್ಳಿ ಎಂಬ ಅರ್ಥ ಬಂದಿದೆ. ಜತೆಗೆ ತೃಣಪುರಿಯನ್ನು ‘ಹುಲ್ಲ’ ಎಂಬ ಪಾಳೇಗಾರ ಆಳ್ವಿಕೆ ನಡೆಸುತ್ತಿದ್ದುದರಿಂದ ತೃಣಪುರಿ ಎಂಬುದು ಹುಲ್ಲನ ಆಳ್ವಿಕೆಯ ಹಳ್ಳಿಯಾಗಿತ್ತು. ನಂತರ ಜನರು ರೂಢಿಗತವಾಗಿ ಹುಲ್ಲನಹಳ್ಳಿ ಹಾಗೂ ಹುಲ್ಲಹಳ್ಳಿ ಎಂದು ಕರೆಯಲಾರಂಭಿಸಿದರು ಎಂದು ಹುಲ್ಲಹಳ್ಳಿ ದರ್ಶನ ಪುಸ್ತಕದ ಬರೆದ ಲೇಖಕ ಹು.ಭೀ.ನಾಗರಾಜ್ ಹೇಳುತ್ತಾರೆ. ಹೆಸರಿಗೆ ತಕ್ಕಂತೆ ಹುಲ್ಲಹಳ್ಳಿಯು ಬತ್ತದ ಕಣಜ. ಕಪಿಲಾ ನದಿಯು ಗ್ರಾಮದ ವರ್ತುಲದಲ್ಲಿ ವಿಶಾಲವಾಗಿ ಹರಿಯುತ್ತದೆ. ಈ ಗ್ರಾಮವು ಕಪಿಲಾ ನದಿಯ ದಕ್ಷಿಣ ದಂಡೆಯಲ್ಲಿರುವ ಪುರಾತನವಾದ ವರದರಾಜ ದೇವಾಲಯ ಮತ್ತು ಮಲ್ಲೇಶ್ವರ ದೇವಾಲಯವಿದೆ.
ಹುಲ್ಲಹಳ್ಳಿಯು ಶ್ರೀಮಂತ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ, ಪುರಾತನ ದೇವಾಲಯಗಳಷ್ಟೇ ಅಲ್ಲದೇ ಜಾನಪದ ಕಲೆ ಮತ್ತು ಸಂಸ್ಕ್ರುತಿಯನ್ನು ಹೂಂದಿದೆ. ಗ್ರಾಮವು ಹಳೇ ಮೈಸೂರು ಪ್ರದೇಶದ ಅವಿಭಾಜ್ಯ ಅಂಗವಾಗಿದೆ. ಮೈಸುರಿನ ರಾಜರಾದ ಒಡೆಯಾರ್ ರಿಗೆ ನಡೆದುಕೋಳ್ಳುವ ಪರಿವಾರ ಜನಾಂಗ ಸಹ ಇಲ್ಲಿದೆ. ಇಲ್ಲಿಯು ಮಲ್ಲೇಶ್ವರ ದೇವಸ್ಥಾನ (ಶಿವನ ದೇವಸ್ಥಾನ ) ಮತ್ತು ವರದರಾಜ ದೇವಸ್ಥಾನ ( ವಿಷ್ಣು ) ಚೋಳರ ಕಾಲದ ವಾಸ್ತುಶಿಲ್ಪವನ್ನು ಹೊಂದಿದೆ. ಇಲ್ಲಿಯ ಸ್ಥಳೀಯ ಜನರ ಜಾನಪದ ಹಾಡುಗಾರಿಕೆ ಹಾಗೂ ಕಲಾಪ್ರದರ್ಶನಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆಯಿದೆ. ಜತೆಗೆ ಜೀವನದ ಸಂಧ್ಯಾಕಾಲದಲ್ಲಿ ಹುಲ್ಲಹಳ್ಳಿ ಸಮೀಪದ ಸಂಗಮದಲ್ಲಿ ಬಂದು ನೆಲೆಸಿದ ಸಂತ ಮಹದೇವ ತಾತಾ ಅವರು ಈ ಹಿಂದೆ ಬಾಲ್ಯಾವಸ್ಥೆಯಲ್ಲಿ ಕಾರ್ಯಸ್ವಾಮಿಯಾಗಿ ಸಂಗಮದಲ್ಲಿ ವಾಸವಿದ್ದರು ಎಂಬ ಕುರಿತು ದಾಖಲೆಗಳು ಲಭ್ಯವಿದೆ. . ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು 1894 ರಲ್ಲಿ ಸ್ಥಾಪಿಸವಾಗಿದೆ [೩]
ಹುಲ್ಲಹಳ್ಳಿಯ ಜನರ ಪ್ರಾಥಮಿಕ ಕಸುಬು ಕೃಷಿ ಮತ್ತು ವ್ಯಪಾರ. ಫಲವತ್ತಾದ ಭೂಮಿ ಮತ್ತು ಅನುಕೂಲಕರ ವಾತಾವರಣವು ಭತ್ತ, ಕಬ್ಬು ಮತ್ತು ವಿವಿಧ ತರಕಾರಿಗಳನ್ನು ಒಳಗೊಂಡಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸೂಕ್ತವಾಗಿದೆ. ಹಳ್ಳಿಯಲ್ಲಿನ ಕೃಷಿ ಪದ್ಧತಿಗಳು ಸಾಂಪ್ರದಾಯಿಕ ವಿಧಾನಗಳು ಮತ್ತು ಆಧುನಿಕ ತಂತ್ರಗಳ ಮಿಶ್ರಣವಾಗಿದ್ದು, ಕೃಷಿಯ ಸುಸ್ಥಿರವಾಗಿದೆ. ಸದಾ ತುಂಬಿ ಹರಿಯುವ ಜೀವ ನದಿ ಕಪಿಲ ಮತ್ತು ಕಬಿನಿ ಬಲ ದಂಡೆಯ ಚಾನಲ್ ನಿಂದ ಹರಿದು ಬರುವ ನೀರಿನಿಂದ ಇಲ್ಲಯ ಕೃಷಿಕ ಸಮ್ರುದ್ದವಾಗಿ ವರ್ಷಕ್ಕೆ ಎರಡು ಬಾರಿ ಬತ್ತವನ್ನು ಬೆಳೆಯುತ್ತಾನೆ. ಹುಲ್ಲಹಳ್ಳಿಯು ತನ್ನ ಅನ್ವರ್ಥನಾಮಕ್ಕೆ ಸರಿಯಾಗಿ ಹುಲ್ಲುಗಾಡಿನಿಂದ ತುಂಬೆ ಜನ, ಜಾನುವರಗಳನ್ನು ಸಲಹಿದೆ.
ಹುಲ್ಲಹಳ್ಳಿಯು ಗ್ರಾಮವಾಸಿಗಳ ಅಗತ್ಯಗಳನ್ನು ಪೂರೈಸುವ ಮೂಲಭೂತ ಶೈಕ್ಷಣಿಕ ಮತ್ತು ಆರೋಗ್ಯ ಸೌಲಭ್ಯಗಳನ್ನು ಹೊಂದಿದೆ. ಗ್ರಾಮವು ಪ್ರಾಥಮಿಕ ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳೊಂದಿಗೆ ಸುಸಜ್ಜಿತವಾಗಿದೆ, ಸಮುದಾಯವು ಅಗತ್ಯ ಸೇವೆಗಳಿಗೆ ಪ್ರವೇಶವನ್ನು ಹೊಂದಿದೆ ಎಂದು ಖಚಿತಪಡಿಸುತ್ತದೆ. ಮೂಲಸೌಕರ್ಯಗಳನ್ನು ಸುಧಾರಿಸಲು ಮತ್ತು ಯುವ ಪೀಳಿಗೆಗೆ ಉತ್ತಮ ಅವಕಾಶಗಳನ್ನು ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ.
ಪಿಯು ಮತ್ತು ಪದವಿ ಸೇರಿದಂತೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಿವೆ [೪] .
ಹುಲ್ಲಹಳ್ಳಿಯ ರಮಣೀಯ ಸೌಂದರ್ಯವು ಹಚ್ಚ ಹಸಿರಿನ ಹೊಲಗಳು, ಜಲಮೂಲಗಳು ಮತ್ತು ಪ್ರಶಾಂತವಾದ ಭೂದೃಶ್ಯಗಳಿಂದ ನಿರೂಪಿಸಲ್ಪಟ್ಟಿದೆ. ಹಳ್ಳಿಯ ನೈಸರ್ಗಿಕ ಪರಿಸರವು ನಗರದ ಜೀವನದ ಜಂಜಾಟದಿಂದ ಶಾಂತಿಯುತ ಹಿಮ್ಮೆಟ್ಟುವಿಕೆಯನ್ನು ಒದಗಿಸುತ್ತದೆ. ಸನಿಹದಲ್ಲಿ ಹರಿಯುವ ಕಬಿನಿ ನದಿಯು ಗ್ರಾಮದ ಸೊಬಗನ್ನು ಹೆಚ್ಚಿಸುವುದರ ಜೊತೆಗೆ ನೀರಾವರಿ ಮತ್ತು ಇತರ ಅಗತ್ಯಗಳಿಗೆ ನೀರಿನ ಮೂಲವಾಗಿದೆ. ಕಬಿನಿ ಬಲ ದಂಡೆಗೆ ನಿರ್ಮಿತವಾಗಿರುವ ಮುಚ್ಚಿದ ಹಾಗು ತೆರೆದ ಅಕ್ವಾಡಕ್ಟ್ಗಳು ಹಾಗು ನೀರಾವರಿಯ ವಿವಿಧ ನಾಲೆಗಳಿಂದ ನೊಡಲು ಕಂಗೊಳಿಸುತ್ತಿದೆ.
ಒಟ್ಟು 2107 ಕುಟುಂಬಗಳು ವಾಸಿಸುತ್ತಿವೆ. 2011 ರ ಜನಗಣತಿಯ ಪ್ರಕಾರ ಹುಲ್ಲಹಳ್ಳಿ ಗ್ರಾಮವು 8794 ಜನಸಂಖ್ಯೆಯನ್ನು ಹೊಂದಿದೆ ಅದರಲ್ಲಿ 4269 ಪುರುಷರು ಮತ್ತು 4525 ಮಹಿಳೆಯರಿದ್ದಾರೆ[೫].