ಹೆತ್ತುತ್ತಿ | |
---|---|
![]() | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | ಮಲ್ವಲೆಸ್
|
ಕುಟುಂಬ: | ಮಲ್ವೇಶಿಯಾ Malvaceae
|
ಕುಲ: | ಸಿಡಾ (Sida)
|
ಪ್ರಜಾತಿ: | S. cordifolia
|
Binomial name | |
ಸಿಡಾ ಕಾರ್ಡಿಫ಼ೋಲಿಯಾ (Sida cordifolia) |
ಹೆತ್ತುತ್ತಿ ಸಸ್ಯವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ಸಿಡಾ ಕಾರ್ಡಿಫ಼ೋಲಿಯಾ.[೧] ಹೆತ್ತುತ್ತಿಯು ಬಲಾದಿವರ್ಗ ಎಂಬ ಸಸ್ಯವರ್ಗಕ್ಕೆ ಸೇರಿದೆ.
ಹೆತ್ತುತ್ತಿಯು ಪೊದೆಯ ರೂಪದಲ್ಲಿ ಬೆಲೆಯುತ್ತದೆ. ನಕ್ಷತ್ರದಂತಿರುವ ಸೂಕ್ಷ್ಮ ರೋಮಗಳು ಗಿಡದ ಎಲ್ಲಾ ಭಾಗದಲ್ಲೂ ಇರುತ್ತದೆ. ಎಲೆಯು ೨-೫ ಸೆಂ.ಮೀ. ಉದ್ದವಾಗಿದ್ದು ಅಂಡಾಕಾರ ಅಥವಾ ದುಂಡಗಿನ ಆಕಾರದಲ್ಲಿ ಇರುತ್ತದೆ. ಎಲೆಯ ಅಂಚು ಹಲ್ಲಿನಂತೆ ಇರುತ್ತದೆ
. ಇದರ ಹೂವು ಹಳದಿ ಬಣ್ಣದ್ದಾಗಿದ್ದು, ಸಣ್ಣದಾಗಿರುತ್ತದೆ. ಇದು ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತದೆ.
ಹೆತ್ತುತ್ತಿಯ ಎಲ್ಲಾ ಭಾಗವನ್ನು ಔಷಧವಾಗಿ ಉಪಯೋಗಿಸಬಹುದಾಗಿದೆ.[೩] ಬೇರಿನ ಕಷಾಯವನ್ನು ಹಲವು ಬಗೆಯ ಜ್ವರ ನಿವಾರಕವಾಗಿ ಬಳಸಲಾಗುತ್ತದೆ. ಅಸ್ಥಮಾ, ಶೀತ, ಕೆಮ್ಮು ಮುಂತಾದವುಗಲನ್ನು ನಿವಾರಿಸಲು ಹುತ್ತತ್ತಿಯು ಸಹಾಯಕವಾಗಿದೆ.[೪] ಇದರ ಚೂರ್ಣವು ಅನೇಕ ಸ್ತ್ರೀರೋಗಗಳನ್ನು, ನರದೌರ್ಬಲ್ಯವನ್ನು ನಿವಾರಿಸುತ್ತದೆ. ಬೇರಿನ ರಸವನ್ನು ಗಾಯಕ್ಕೆ ಉಪಯೊಗಿಸಬಹುದಾಗಿದೆ. ಬೇರಿನ ತೊಗಟೆಯನ್ನು ಎಳ್ಳೆಣ್ಣೆ ಮತ್ತು ಹಾಲಿನೊಂದಿಗೆ ಸೇವಿಸುವುದರಿಂದ ಪಾರ್ಶ್ವವಾಯುವನ್ನು ಗುಣಮುಖಗೊಳೀಸುತ್ತದೆ.