ಹೆಬ್ಬೆ ಜಲಪಾತ - ಹೆಬ್ಬೆ ಜಲಪಾತವು ೧೩.೫೪೧೭° N, ೭೫.೭೨೫೮° E[೧] ನಲ್ಲಿ ಭಾರತದ ಕರ್ನಾಟಕದ ಪ್ರಸಿದ್ಧ ಗಿರಿಧಾಮ ಕೆಮ್ಮಣ್ಣುಗುಂಡಿಯಿಂದ ೧೦ ಕಿ.ಮೀ ದೂರದಲ್ಲಿದೆ. ಕಾಫಿ ಎಸ್ಟೇಟಿನ ಒಳಗೆ ಇರುವ ಈ ಜಲಪಾತವನ್ನು ಕಾಲ್ನಡಿಗೆಯಲ್ಲೂ ಅಥವಾ ನಾಲ್ಕು-ಚಕ್ರ ವಾಹನಗಳ ಮೂಲಕವೂ ತಲುಪಬಹುದು. ಈ ಜಲಪಾತವು ೫೫೧ ಅಡಿ[೨] ಎತ್ತರದಿಂದ ಕೆಳಕ್ಕೆ ಧುಮುಕುತ್ತದೆ.
ಇದು ಎರಡು ಹಂತಗಳಲ್ಲಿ ಹರಿಯುತ್ತದೆ:
ಈ ಜಲಪಾತಕ್ಕೆ ಚಾರಣದ ವ್ಯವಸ್ತೆ ಲಭ್ಯವಿದೆ (ಆಗಸ್ಟ್ ೨೦೧೬ ರಂತೆ), ಆದರೆ ಈ ಸ್ಥಳವು ಜಿಗಣೆಗಳಿಂದ(ವಿಶೇಷವಾಗಿ ಮಳೆಗಾಲದಲ್ಲಿ) ತುಂಬಿರುತ್ತದೆ. ಖಾಸಗಿ ಎಸ್ಟೇಟುಗಳ ಮೂಲಕ ಸಾಗುವ ಸರಕಾರಿ ಅನುಮೋದಿತ ಅರಣ್ಯ ಜೀಪ್ ಗಳನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಜಲಪಾತವನ್ನು ತಲುಪುವ ಕೊನೆಯ ಕಿಲೋಮೀಟರ್ ಚಾರಣ ಮಾಡಬೇಕಾಗಿದೆ.
ಬೀರೂರು ಕಡೂರು ತಾಲೂಕಿನಲ್ಲಿದೆ. ಈ ಪಟ್ಟಣಕ್ಕೆ ಬೆಂಗಳೂರು-ಚಿಕ್ಕಮಗಳೂರು ಅಥವಾ ಬೆಂಗಳೂರು-ಶಿವಮೊಗ್ಗಗಳ ನಡುವೆ ಸಂಚರಿಸುವ ಬಸ್ಸುಗಳ ಮೂಲಕ ಸಾಕಷ್ಟು ಸಂಪರ್ಕ ಕಲ್ಪಿಸಲಾಗಿದೆ. ನೀವೇ ನಿಮ್ಮ ವಾಹನಗಳಲ್ಲಿ ಪ್ರಯಾಣಿಸುವುದಾದರೆ, ಪಟ್ಟಣವು ಸುಂದರವಾದ ರಾಷ್ಟ್ರೀಯ ಹೆದ್ದಾರಿ ೨೦೬[೩] (ಅ.ಕ.ಅ ರಾಜ್ಯ ಹೆದ್ದಾರಿನಲ್ಲಿದೆ ೬೮; ಎಸ್ಎಚ್ ೬೮ ಅಥವಾ ಬಿಹೆಚ್ ರಸ್ತೆ; ಬೆಂಗಳೂರು-ಹೊನ್ನಾವರ ರಸ್ತೆ). ಬಿರೂರಿನಿಂದ ನೀವು ಸ್ಥಳೀಯ ಟ್ಯಾಕ್ಸಿrgr ಅಥವಾ ಖಾಸಗಿ ಬಸ್ಗಳಂತಹ ಸಾರಿಗೆ ವಿಧಾನಕ್ಕೆ ಬದಲಾಯಿಸಬೇಕಾಗುತ್ತದೆ.
ಬೀರೂರು ಬೆಂಗಳೂರು-ಶಿವಮೊಗ್ಗ[೪] ಬೆಂಗಳೂರು-ದಾವಣಗೆರೆ ನಡುವಿನ ದಕ್ಷಿಣ ರೈಲ್ವೆ ಮಾರ್ಗದಲ್ಲಿದೆ. ಬಿರೂರಿನಿಂದ, ನೀವು ಸ್ಥಳೀಯ ಟ್ಯಾಕ್ಸಿ ಅಥವಾ ಖಾಸಗಿ ಬಸ್ಗಳಂತಹ ಸಾರಿಗೆ ವಿಧಾನಕ್ಕೆ ಬದಲಾಯಿಸಬೇಕಾಗುತ್ತದೆ.
ಹತ್ತಿರದ ವಿಮಾನ ನಿಲ್ದಾಣಗಳು ಬೆಂಗಳೂರು[೫] ಮತ್ತು ಮಂಗಳೂರಿನಲ್ಲಿವೆ[೬], ಮತ್ತು ಇದು ರಸ್ತೆಯ ಮೂಲಕ 5 ಗಂಟೆಗಳ ಪ್ರಯಾಣವಾಗಿದೆ.