ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ಪತ್ನಿ ಮತ್ತು ಹೊಯ್ಸಳ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚೆನ್ನಕೇಶವ ದೇವಸ್ಥಾನಬೇಲೂರಿನ ಚೆನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ.
ವಿಷ್ಣುವರ್ಧನನ್ನು ಹೊಯ್ಸಳ ಸಾಮ್ರಾಜ್ಯದ ರಾಜ ಎರೆಯಂಗನ ಎರಡನೇ ಮಗನಾಗಿದ್ದು, ವಿನಯಾದಿತ್ಯನ ಮೊಮ್ಮಗನಾಗಿರುತ್ತಾನೆ.ಈತನ ಪತ್ನಿ ಮತ್ತು ಹೊಯ್ಸಳ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈತನಿಗೆ ಮೂರು ಜನ ಗಂಡು ಮಕ್ಕಳು (ಕುಮಾರಬಲ್ಲಾಳ,ಒಂದನೇಯ ನರಸಿಂಹ, ವಿಜಯನಾರಾಯಣ) ಮತ್ತು ಒಂದು ಹೆಣ್ಣು (ಏಚಲದೇವಿ) ಮಗಳಿರುತ್ತಾರೆ. ಮುಂದೆ ವಿಷ್ಣುವರ್ಧನನ ಕಾಲದ ನಂತರ ಈತನ ಎರಡನೇಯ ಮಗ ಒಂದನೇಯ ನರಸಿಂಹನು ಹೊಯ್ಸಳ ಸಾಮ್ರಾಜ್ಯದ ರಾಜನಾಗುತ್ತಾನೆ.
ವಿಷ್ಣುವರ್ಧನನ್ನು ಹೊಯ್ಸಳ ಸಾಮ್ರಾಜ್ಯದ ರಕ್ಷಣೆ ಮತ್ತು ಆಡಳಿತಕ್ಕೆ ತನ್ನ ಅಣ್ಣನಾದ ಒಂದನೇಯ ವೀರ ಬಲ್ಲಾಳನ ಜೊತೆಗೂಡಿ ಕೆಲಸವನ್ನು ಮಾಡಿರುತ್ತಾನೆ. ವಿಷ್ಣುವರ್ಧನನ್ನು ಕ್ರಿ.ಶ. ೧೧೧೫ ರಲ್ಲಿ ಚೋಳರ ಮೇಲೆ ಗಂಗಾವಾಡಿಯಲ್ಲಿ ಮೊದಲ ದೊಡ್ಡ ವಿಜಯವನ್ನು ಸಾಧಿಸಿರುತ್ತಾನೆ. ಈ ಯುದ್ಧದಲ್ಲಿ ವಿಷ್ಣುವರ್ಧನನ್ನು ೨೧ನೇ ಶತಮಾನದ ದಕ್ಷಿಣ ಕರ್ನಾಟಕದ ಬಹು ಮುಖ್ಯ ಸ್ಥಳಗಳನ್ನು ವಶಕ್ಕೆ ಪಡೆದು ಆಡಳಿತವನ್ನು ನಡೆಸಿರುತ್ತಾನೆ. ಗಂಗಾರಾಜ ಒಬ್ಬ ವಿಷ್ಣುವರ್ಧನ ಸೇನೆಯ ಸೇನಾನಿಯಾಗಿದು ಚೋಳರಿಂದ ಹೊಯ್ಸಳ ಸಾಮ್ರಾಜ್ಯದ ರಕ್ಷಣೆಯನ್ನು ಮಾಡಿರುತ್ತಾನೆ. ವಿಷ್ಣುವರ್ಧನನ ಸಾಹಸಕ್ಕೆ ಈತನಿಗೆ ತಲಕಾಡುಗೋಂಡ ಮತ್ತು ವೀರ ಗಂಗಾ ಎಂಬ ಬಿರುದನ್ನು ಕೊಟ್ಟಿರುತ್ತಾರೆ. ಇದೇ ನೆನಪಿನಲ್ಲಿ ಕೀರ್ತಿನಾರಯಣ ದೇವಸ್ಥಾನವನ್ನು ತಲಕಾಡಿನಲ್ಲಿ ಕಟ್ಟಿದು ಮತ್ತು ಬೇಲೂರಿನ ಚೆನ್ನಕೇಶವ ದೇವಸ್ಥಾನವನ್ನು ಕಟ್ಟಲು ಪ್ರಾರಂಭಿಸಲಾಗಿರುತ್ತದೆ. ಹೊಯ್ಸಳರ ಕಾಲದ ನಾಣ್ಯಗಳನ್ನು ಚಾಲುಕ್ಯರ ಮೇಲೆ ಪಡೆದ ವಿಜಯದ ನೆನಪಿನಲ್ಲಿ ಮುದ್ರಿಸಲಾಗಿರುತ್ತದೆ.