![]() | |
ದಿನಾಂಕ | 3 April 2013 | – 26 ಮೇ 2013
---|---|
ನಿರ್ವಾಹಕ | BCCI |
ಕ್ರಿಕೆಟ್ ಸ್ವರೂಪ | Twenty20 |
ಪಂದ್ಯಾವಳಿ ಸ್ವರೂಪ | Double round robin and playoffs |
ಅತಿಥೆಯ | ಭಾರತ |
ಚಾಂಪಿಯನ್ | Mumbai Indians |
ಸ್ಪರ್ಧಿಗಳು | 9 |
ಪಂದ್ಯಗಳು | 76 |
ಹೆಚ್ಚಿನ ರನ್ಗಳು | Michael Hussey (CSK) (733) |
ಹೆಚ್ಚಿನ ವಿಕೆಟ್‌ಗಳು | Dwayne Bravo (CSK) (32) |
Official website | www.iplt20.com |
೨೦೧೩ರ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಐ ಪಿ ಎಲ್ ೬ ಎಂದೂ ಕರೆಯಲಾಗುತ್ತದೆ. ೨೦೦೭ರಲ್ಲಿ ಆರಂಭವಾದ ಈ ಕ್ರೀಡಾಕೂಟದ ೬ನೇ ಆವೃತ್ತಿ ಇದು. ಈ ಅವೃತ್ತಿಯಲ್ಲಿ ೯ ತಂಡಗಳು ಭಾಗವಹಿಸಿದ್ದವು. ಇದು ಏಪ್ರಿಲ್ ೩ ರಿಂದ ಮೇ ೨೬ ರವರೆಗೆ ನಡೆಯಿತು. ಇದರ ಉದ್ಘಾಟನಾ ಸಮಾರಂಭ ಎಪ್ರಿಲ್ ೨ರಂದು ಕಲ್ಕತ್ತಾದ ಸಾಲ್ಟ್ ಲೇಕ್ ಕ್ರಿಡಾಂಗಣದಲ್ಲಿ ನಡೆಯಿತು. ಇದೇ ಮೊದಲ ಬಾರಿಗೆ ಪೆಪ್ಸಿ ಕಂಪನಿಯು ಐಪಿಎಲ್ ನ ಮುಖ್ಯ ಪೋಷಕರಾದರು. ಈ ಆವೃತ್ತಿಯು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರು ನಡೆಸಿದ ಕಳ್ಳಾಟ ಬಯಲಿಗೆ ಬಂದು ಕುಖ್ಯಾತಿ ಪಡೆಯಿತು. ಫ಼ಿನಲ್ ನಲ್ಲಿ ಮುಂಬಯಿ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ೨೩ ರನ್ ಗಳಿಂದ ಸೋಲಿಸಿ ಚಾಂಪಿಯನ್ನರಾದರು.