36 Vayadhinile | |
---|---|
ನಿರ್ದೇಶನ | ರೋಷನ್ ಆಂಡ್ರೂಸ್ |
ನಿರ್ಮಾಪಕ | ಸೂರ್ಯ |
ಲೇಖಕ | ವಿಜಿ |
ಚಿತ್ರಕಥೆ | ಬಾಬಿ ಸಂಜಯ್ |
ಕಥೆ | ರೋಷನ್ ಆಂಡ್ರೂಸ್ |
ಪಾತ್ರವರ್ಗ | ಜ್ಯೋತಿಕಾ [ರಹಮಾನ್ |
ಸಂಗೀತ | ಸಂತೋಷ್ ನಾರಾಯಣನ್ |
ಛಾಯಾಗ್ರಹಣ | ಆರ್. ದಿವಾಕರನ್ |
ಸಂಕಲನ | ಮಹೇಶ್ ನಾರಾಯಣನ್ |
ಸ್ಟುಡಿಯೋ | 2D Entertainment |
ವಿತರಕರು | ಸ್ಟುಡಿಯೋ ಗ್ರೀನ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 115 minutes |
ದೇಶ | India |
ಭಾಷೆ | Tamil |
ಬಂಡವಾಳ | ₹೩ ಕೋಟಿ ಯುಎಸ್$೬,೬೬,೦೦೦)[೨] |
೩೬ ವಯದಿನಿಲೆ(೩೬ನೇ ವಯಸ್ಸಿನಲ್ಲಿ ಎಂಬ ಅರ್ಥ) ರೋಶನ್ ಆಂಡ್ರೂಸ್ ನಿರ್ದೇಶಿಸಿದ 2015ರ ತಮಿಳು ಭಾಷೆಯ ಹಾಸ್ಯ ಚಲನಚಿತ್ರ. ಇದು ಅವರ ಸ್ವಂತ ಮಲಯಾಳಂ ಚಲನಚಿತ್ರ ಹೌ ಓಲ್ಡ್ ಆರ್ ಯೂ (2014) ನ ರಿಮೇಕ್ ಆಗಿದೆ . ಇದನ್ನು ಸೂರ್ಯ ಶಿವಕುಮಾರ ಅವರ ನಿರ್ಮಾಣ ಸ್ಟುಡಿಯೋ 2ಡಿ ಎಂಟರ್ಟೈನ್ಮೆಂಟ್ ಅಡಿಯಲ್ಲಿ ನಿರ್ಮಿಸಲಾಗಿದೆ. ಇದು ನಿರ್ಮಾಪಕರಾಗಿ ಅವರ ಚೊಚ್ಚಲ ಚಿತ್ರ. ಎಂಟು ವರ್ಷಗಳ ವಿರಾಮದ ನಂತರ ಜ್ಯೋತಿಕ ಚಲನಚಿತ್ರಗಳಿಗೆ ಮರಳುತ್ತಿರುವ ಈ ಚಿತ್ರದಲ್ಲಿ ರೆಹಮಾನ್, ಅಭಿರಾಮಿ, ನಾಸರ್, ದೆಹಲಿ ಗಣೇಶ್ ಮತ್ತು ಸಿದ್ಧಾರ್ಥ ಬಸು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ.[೩] ಚಿತ್ರದ ಧ್ವನಿಪಥವನ್ನು ಸಂತೋಷ್ ನಾರಾಯಣನ್ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಕ್ರಮವಾಗಿ ಆರ್. ದಿವಾಕರನ್ ಮತ್ತು ಮಹೇಶ್ ನಾರಾಯಣನ್ ನಿರ್ವಹಿಸಿದ್ದಾರೆ.
ಈ ಚಿತ್ರವು 15 ಮೇ 2015 ರಂದು ಬಿಡುಗಡೆಯಾಯಿತು ಮತ್ತು ಮುಖ್ಯವಾಗಿ ಜ್ಯೋತಿಕಾ ಅವರ ಅಭಿನಯದ ಬಗ್ಗೆ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಅವರು 63 ನೇ ಫಿಲ್ಮ್ಫೇರ್ ಪ್ರಶಸ್ತಿ ದಕ್ಷಿಣದಲ್ಲಿ ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ವಿಮರ್ಶಕರ ಪ್ರಶಸ್ತಿ ಮತ್ತು 2015 ರ ಅತ್ಯುತ್ತಮ ನಟಿಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಗೆದ್ದರು.[೪]ಆಕೆಗೆ ಬಂದ ಪ್ರಶಸ್ತಿಯ ಜೊತೆಗೆ ಈ ಚಿತ್ರವು 2015ರ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಏಳು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
36 ವರ್ಷದ ವಸಂತಿ ಕಂದಾಯ ಇಲಾಖೆಯಲ್ಲಿ ಯು. ಡಿ. ಗುಮಾಸ್ತರಾಗಿದ್ದಾರೆ. ಅವರ ಪತಿ ತಮಿಳ್ಸೆಲ್ವನ್ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಾರೆ. ತಮಿಝೆಲ್ವಾನ್/ತಮಿಳ್ಸೆಲ್ವನ್ ಐರ್ಲೆಂಡ್ ಗೆ ವಲಸೆ ಹೋಗಲು ಬಯಸುತ್ತಾನೆ. ಆದರೆ ವಸಂತಿಯು ತನ್ನ ವಯಸ್ಸಿನ ಸಮಸ್ಯೆಯಿಂದಾಗಿ ಹೆಚ್ಚಿನ ಐರಿಷ್ ಕಂಪನಿಗಳು ತನ್ನ ಉದ್ಯೋಗದ ಅರ್ಜಿಗಳನ್ನು ನಿರಾಕರಿಸುವುದರಿಂದ ಅವನೊಂದಿಗೆ ಹೋಗಲು ಸಾಧ್ಯವಾಗುವುದಿಲ್ಲ. ಆಕೆಯ ಜೀವನದಲ್ಲಿ ಆಸಕ್ತಿದಾಯಕವಾದದ್ದೇನೂ ಇಲ್ಲ-ಆಕೆ ಪ್ರಾಪಂಚಿಕ ಜೀವನವನ್ನು ನಡೆಸುತ್ತಾಳೆ ಆದರೆ ಆಕೆ ಬದಲಾವಣೆಯನ್ನು ಬಯಸುತ್ತಾಳೆ.
ಒಂದು ದಿನ ವಸಂತಿಯನ್ನು ಐಜಿ ರಾಜನ್ ತನ್ನ ಕಚೇರಿಗೆ ಕರೆಸುತ್ತಾನೆ ಮತ್ತು ಭಾರತದ ಅಧ್ಯಕ್ಷರು ತನ್ನೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ಅವಳು ತಿಳಿದುಕೊಳ್ಳುತ್ತಾಳೆ. ಆಕೆ ಅಧ್ಯಕ್ಷರ ಮುಂದೆ ಮೂರ್ಛೆ ಹೋದ ನಂತರ ಈ ಭೇಟಿಯು ದುರಂತದಲ್ಲಿ ಕೊನೆಗೊಳ್ಳುತ್ತದೆ ಮತ್ತು ಆಕೆ ಫೇಸ್ಬುಕ್ ಮೀಮ್ಗಳ(ಹಾಸ್ಯದ) ವಿಷಯವಾಗುತ್ತಾಳೆ. ಶೀಘ್ರದಲ್ಲೇ ಆಕೆಯ ಪತಿ ಮತ್ತು ಮಗಳು ಮಿಥಿಲಾ ಐರ್ಲೆಂಡ್ಗೆ ಹಾರಿಹೋಗುವುದನ್ನು ಆಕೆ ಅಸಹಾಯಕತೆಯಿಂದ ನೋಡುತ್ತಾಳೆ.
ವಸಂತಿಯ ಹಳೆಯ ಸಹಪಾಠಿ ಸುಸಾನ್ ಡೇವಿಡ್, ಈಗ ಯಶಸ್ವಿ ಸಿ. ಎಂ. ಓ. ಆಕೆಗೆ ಆಕೆ ಮುಂಚೆ ಆಗಿದ್ದ ಧೈರ್ಯಶಾಲಿ, ಬಲವಾದ ಇಚ್ಛಾಶಕ್ತಿಯ ಮಹಿಳೆಯನ್ನು ಆಕೆ ನೆನಪಿಸುತ್ತಾಳೆ. ದೊಡ್ಡ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಹೊಂದಿರುವ ತನ್ನ ಬಾಲ್ಯದ ಸ್ವಭಾವವನ್ನು ಪುನಃ ಕಂಡುಹಿಡಿಯಲು ಆಕೆಗೆ ಸ್ಫೂರ್ತಿ ನೀಡುತ್ತಾಳೆ . ತನ್ನ ಜೀವನದಲ್ಲಿ ದೊಡ್ಡ ಗುರಿಗಳನ್ನು ಹೊಂದಲು ಪ್ರೋತ್ಸಾಹಿಸಲ್ಪಟ್ಟ ವಸಂತಿಯು, ಮದುವೆಯ ಅಡುಗೆ ಆದೇಶದ ಮೂಲಕ ಒಂದು ಕಲ್ಪನೆಯನ್ನು ಪಡೆಯುತ್ತಾಳೆ. ವಿಷಕಾರಿ ಕೀಟನಾಶಕಗಳನ್ನು ಸಿಂಪಡಿಸಲಾಗುವ ಅನಾರೋಗ್ಯಕರ ಮಾರುಕಟ್ಟೆ ತರಕಾರಿಗಳ ಬಗ್ಗೆ ತಿಳಿದುಕೊಂಡು ತನ್ನ ಮನೆಯನ್ನೇ ಆರೋಗ್ಯಕಾರಿ ತರಕಾರಿ ಬೆಳೆಯಬಹುದಾದ ಹಸಿರುಮನೆಯನ್ನಾಗಿ(ಗ್ರೀನ್ ಹೌಸ್) ಆಗಿ ಪರಿಷ್ಕರಿಸುತ್ತಾಳೆ . ತನ್ನ ನೆರೆಹೊರೆಯ ಇತರ ಮಹಿಳೆಯರಿಗೆ ತಮ್ಮ ಕುಟುಂಬಗಳ ಕಲ್ಯಾಣಕ್ಕಾಗಿ ತಮ್ಮದೇ ಆದ ಹಸಿರುಮನೆಗಳನ್ನು ಪ್ರಾರಂಭಿಸುವಂತೆ ಮನವಿ ಮಾಡುತ್ತಾಳೆ.
ಸುಸಾನ್ ಆ ಪ್ರದೇಶದ ವಾರ್ಷಿಕ ವಾಸ್ತುಶಿಲ್ಪ ಸಮ್ಮೇಳನದಲ್ಲಿ ವಸಂತಿಗೆ ಅವಕಾಶವೊಂದನ್ನು ನೀಡುತ್ತಾಳೆ . ಈ ಸಮ್ಮೇಳನಕ್ಕೆ ದೇಶದ ಗಣ್ಯರು ಬಂದಿರುತ್ತಾರೆ. ಸಾವಯವ ಹಸಿರುಮನೆ ಕೃಷಿ ಪರಿಕಲ್ಪನೆಯ ಕುರಿತಾದ ಆಕೆಯ ಭಾಷಣವು ಪ್ರೇಕ್ಷಕರಿಂದ ಉತ್ತಮವಾಗಿ ಸ್ವೀಕರಿಸಲ್ಪಡುತ್ತದೆ. ತನ್ನ ಪತಿಯ ಪ್ರತಿರೋಧ ಮತ್ತು ಬೆಂಬಲದ ಕೊರತೆಯ ಹೊರತಾಗಿಯೂ, ವಸಂತಿಯು ತನ್ನ ಹೊಸ ಯೋಜನೆಯನ್ನು ಮುಂದುವರಿಸುತ್ತಾಳೆ. ಇದು ಮದುವೆಯ ಅಡುಗೆ ಆದೇಶದ ಬೇಡಿಕೆಯನ್ನು ಪೂರೈಸಲು ಮತ್ತು ತನ್ನ ಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾದ ಕಾರಣ ದೊಡ್ಡ ಯಶಸ್ಸನ್ನು ಕಾಣುತ್ತದೆ . ಆಕೆ ತನ್ನ ಪ್ರಯತ್ನಗಳಿಗಾಗಿ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮೆಚ್ಚುಗೆಯನ್ನು ಪಡೆಯುತ್ತಾಳೆ. ಈ ಯಶಸ್ಸಿನ ನಂತರ, ವಸಂತಿಯು ಮತ್ತೊಮ್ಮೆ ಭಾರತದ ರಾಷ್ಟ್ರಪತಿಗಳಿಂದ ಆಹ್ವಾನವನ್ನು ಪಡೆಯುತ್ತಾಳೆ. ಈ ಬಾರಿ, ವಸಂತಿಯು ಅಚಲಳಾಗಿ ರಾಷ್ಟ್ರಪತಿಯವರ ಪ್ರಶ್ನೆಗಳಿಗೆ ಜಾಣತನದಿಂದ ಉತ್ತರಿಸುತ್ತಾಳೆ ಮತ್ತು ಅಂತಿಮವಾಗಿ ತನ್ನ ಗಂಡ ಮತ್ತು ಮಗಳ ಗೌರವ ಮತ್ತು ಮೆಚ್ಚುಗೆಯನ್ನು ಪಡೆಯುತ್ತಾಳೆ.
ಆಗಸ್ಟ್ 2014ರಲ್ಲಿ, ನಟಿ ಜ್ಯೋತಿಕಾ ಏಳು ವರ್ಷಗಳ ವಿಶ್ರಾಂತಿಯ ನಂತರ ರೋಶನ್ ಆಂಡ್ರೂಸ್ ಅವರ ಮಲಯಾಳಂ ಚಿತ್ರ ಹೌ ಓಲ್ಡ್ ಆರ್ ಯು (2014) ನ ತಮಿಳು ರಿಮೇಕ್ನಲ್ಲಿ ನಟಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಮರಳಲಿದ್ದಾರೆ ಎಂದು ಘೋಷಿಸಲಾಯಿತು. ಇದರಲ್ಲಿ ಮಂಜು ವಾರಿಯರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜ್ಯೋತಿಕಾ ಅವರ ಪತಿ ಸೂರ್ಯ ಅವರು ತಮ್ಮ ನಿರ್ಮಾಣ ಬ್ಯಾನರ್ 2ಡಿ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲು ಒಪ್ಪಿಕೊಂಡರು. ನಿರ್ದೇಶಕ ಮತ್ತು ಬರಹಗಾರ ರೋಶನ್ ಆಂಡ್ರೂಸ್ ಮತ್ತು ಬಾಬಿ ಸಂಜಯ್ ಅವರನ್ನು ಮೂಲ ಆವೃತ್ತಿಯಿಂದ ಉಳಿಸಿಕೊಳ್ಳಲಾಯಿತು.[೫] ಜ್ಯೋತಿಕಾ ಮತ್ತು ತಾನು ಮಲಯಾಳಂ ಆವೃತ್ತಿಯು ಪ್ರಭಾವಿತರಾಗಿದ್ದೇವೆ ಮತ್ತು ಜ್ಯೋತಿಕಾ ನಟಿಯಾಗಿ ಮರಳಲು ಒಪ್ಪಿಕೊಳ್ಳಲು ಎರಡು ದಿನಗಳನ್ನು ತೆಗೆದುಕೊಂಡರು ಎಂದು ಸೂರ್ಯ ಬಹಿರಂಗಪಡಿಸಿದರು.[೬] ಮೂಲತಃ ಕುಂಚಾಕೋ ಬೋಬನ್ ನಿರ್ವಹಿಸಿದ ಪಾತ್ರವನ್ನು ನಿರ್ವಹಿಸಲು ನಟ ರೆಹಮಾನ್ ಅವರನ್ನು ಅಕ್ಟೋಬರ್ 2014 ರಲ್ಲಿ ಪಾತ್ರವರ್ಗಕ್ಕೆ ಸೇರಿಸಲಾಯಿತು.[೭][೮] ಚಿತ್ರದ ಸಂಗೀತ ಮತ್ತು ಧ್ವನಿಪಥವನ್ನು ಸಂಯೋಜಿಸಲು ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಕರೆತರಲಾಯಿತು[೯]
ಚಿತ್ರದ ಚಿತ್ರೀಕರಣವು 2014ರ ನವೆಂಬರ್ನಲ್ಲಿ ಪ್ರಾರಂಭವಾಯಿತು ಮತ್ತು ಚೆನ್ನೈ, ದೆಹಲಿ ಮತ್ತು ರಾಜಸ್ಥಾನ ಚಿತ್ರೀಕರಣಗಳನ್ನು ನಡೆಸಲು ಯೋಜಿಸಲಾಗಿತ್ತು.[೧೦] ಚಿತ್ರದ ಕೊನೆಯ ದೃಶ್ಯವನ್ನು ಮೊದಲು ಚಿತ್ರೀಕರಿಸಲಾಯಿತು. ಅದರಲ್ಲಿ ಜ್ಯೋತಿಕಾಳ ಪಾತ್ರವು ರಾಷ್ಟ್ರಪತಿಗಳನ್ನು ಭೇಟಿಯಾಗುವ ದೃಶ್ಯಗಳನ್ನು, ಸಿದ್ಧಾರ್ಥ ಬಸು ನಿರ್ವಹಿಸಿದ ದೃಶ್ಯಗಳನ್ನು, ನವದೆಹಲಿಯಲ್ಲಿ ಚಿತ್ರೀಕರಿಸಲಾದ ರಾಷ್ಟ್ರಪತಿ ಭವನ ದಲ್ಲಿ ಚಿತ್ರೀಕರಿಸಲಾಯಿತು.[೧೧][೧೨] ಮೊದಲ ವೇಳಾಪಟ್ಟಿಯಲ್ಲಿ ನಟಿ ಅಭಿರಾಮಿ ಸಹ ಪ್ರಮುಖ ಪಾತ್ರವನ್ನು ನಿರ್ವಹಿಸಲು ಸಹಿ ಹಾಕಿದರು. ಇದು ಹನ್ನೊಂದು ವರ್ಷಗಳ ಅನುಪಸ್ಥಿತಿಯ ನಂತರ ತಮಿಳು ಚಲನಚಿತ್ರಗಳಿಗೆ ಮರಳುವಿಕೆಯನ್ನು ಸೂಚಿಸುತ್ತದೆ.[೧೩] ಜ್ಯೋತಿಕಾ ಅವರು 2015ರ ಏಪ್ರಿಲ್ನಲ್ಲಿ ಚೆನ್ನೈನ ಎ. ವಿ. ಎಂ ಸ್ಟುಡಿಯೋಸ್ನಲ್ಲಿ ನಿರ್ಮಿಸಲಾದ ಸೆಟ್ನಲ್ಲಿ "ರಸಿಥಿ" ಹಾಡಿಗಾಗಿ ಚಿತ್ರದ ಚಿತ್ರೀಕರಣವನ್ನು ವಿಸ್ತರಿಸಿದರು.
36 Vayadhinile | ||||
---|---|---|---|---|
Soundtrack album by | ||||
Released | 6 April 2015 | |||
Recorded | 2015 | |||
Genre | Feature film soundtrack | |||
Length | 33:32 | |||
Language | Tamil | |||
Label | Think Music | |||
Producer | Santhosh Narayanan | |||
Santhosh Narayanan chronology | ||||
|
36 ವಯಾದಿನಿಲೆ ಚಿತ್ರದ ಮುಖ್ಯ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಸಂತೋಷ್ ನಾರಾಯಣನ್ ಸಂಯೋಜಿಸಿದ್ದಾರೆ. ಈ ಆಲ್ಬಂ ಹನ್ನೊಂದು ಹಾಡುಗಳನ್ನು ಒಳಗೊಂಡಿದೆ. ಇದರಲ್ಲಿ ಮೂರು ಹಾಡುಗಳಿವೆ. ಮೂಲ ಸಂಗೀತದಿಂದ ಐದು ವಾದ್ಯಗಳ ಹಾಡು ಮತ್ತು ಮೂರು ಕ್ಯಾರಿಯೋಕೆ ಹಾಡುಗಳು ಸೇರಿವೆ.[೧೪] ಈ ಮೂರು ಹಾಡುಗಳಿಗೆ ಸಾಹಿತ್ಯವನ್ನು ವಿವೇಕ್ ಬರೆದಿದ್ದಾರೆ.[೧೫] ಚಿತ್ರದ ಧ್ವನಿಮುದ್ರಣವನ್ನು 2015ರ ಏಪ್ರಿಲ್ 6ರಂದು ಚೆನ್ನೈ ದಿ ಲೀಲಾ ಪ್ಯಾಲೇಸ್ ಹೋಟೆಲ್, ನಟ ಸೂರ್ಯ, ಕಾರ್ತಿ ಮತ್ತು ಶಿವಕುಮಾರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು, ಇದನ್ನು ದಿವ್ಯಾದರ್ಶಿನೀ ನಡೆಸಿಕೊಟ್ಟರು.[೧೬][೧೭] ಚಿತ್ರದ ಟ್ರೇಲರ್ ಮತ್ತು ಎರಡು ಹಾಡುಗಳಾದ "ರಸಾಥಿ" ಮತ್ತು "ಹ್ಯಾಪಿ-ನಾಲು ಕಝುದಾ" ಗಳನ್ನು ಸಂತೋಷ್ ಅವರು ಕಾರ್ಯಕ್ರಮದಲ್ಲಿ ನೇರಪ್ರಸಾರ ಮಾಡಿದರು.[೧೮] ಈ ಆಲ್ಬಮ್ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಸಿಫಿ ಈ ಆಲ್ಬಂಗೆ 5ಕ್ಕೆ 4 ನಕ್ಷತ್ರಗಳನ್ನು ನೀಡಿ, "ಸಂತೋಷ್ ನಾರಾಯಣನ್ ಅವರು ತಮ್ಮ ಪ್ರಭಾವಶಾಲಿ ಚಲನಚಿತ್ರಗಳ ಪಟ್ಟಿಗೆ ಸೇರಿಸುವ ಮತ್ತೊಂದು ಅದ್ಭುತ ಆಲ್ಬಂ ಅನ್ನು ನೀಡಿದ್ದಾರೆ. 36 ವಯಾದಿನಿಲೆ ಕೆಲವು ಆಕರ್ಷಕ ಹಾಡುಗಳು ಮತ್ತು ಹಿತವಾದ ಹಿನ್ನೆಲೆ ಸಂಗೀತದ ಉತ್ತಮ ಸಂಗ್ರಹವನ್ನು ಹೊಂದಿದ್ದು, ಇದು ಚಲನಚಿತ್ರಕ್ಕೆ ಉತ್ತಮ ಗುಣಲಕ್ಷಣವಾಗಿದೆ" ಎಂದು ಬರೆದಿದ್ದಾರೆ.[೧೯] "ಜ್ಯೋತಿಕಾ ಅವರ ಪುನರಾಗಮನಕ್ಕಾಗಿ ಸಂತೋಷ್ ನಾರಾಯಣನ್ ಅವರ ಕೆಲವು ಸ್ಫೂರ್ತಿ-ಪ್ರಚೋದನೆಯ ಸಂಗೀತ ತುಣುಕುಗಳನ್ನು" ಬಿಹೈಂಡ್ವುಡ್ಸ್ 5ಕ್ಕೆ 3 ಎಂದು ನೀಡಿದರು. ಇಂಡಿಯಾಗ್ಲಿಟ್ಜ್ 5ಕ್ಕೆ 2.75 ನೀಡಿ, "36 ವಯಾದಿನಿಲೆ" ಸಂತೋಷ್ ನಾರಾಯಣನ್ ಅವರಿಂದ ಮತ್ತೊಂದು ಮಾಸ್ಟರ್ ಪೀಸ್ ಆಗಿದೆ. ಸುಂದರ ಸಂಗೀತದಲ್ಲಿ ಮುಳುಗಲು ಇನ್ನು ಕಾಯಬೇಡಿ! ಮೂವಿಕ್ರೋ 5ಕ್ಕೆ 3 ನೀಡಿ, "ಒಟ್ಟಾರೆಯಾಗಿ, ಇದು ಪರದೆಯ ಮೇಲೆ ಉತ್ತಮವಾಗಿ ಆಡುವ ಒಂದು ಸಾಧಾರಣ ಆಲ್ಬಮ್ ಆಗಿದೆ".[೨೦][೨೧][೨೨]
ಎಲ್ಲ ಹಾಡುಗಳು ವಿವೇಕ್ ಅವರಿಂದ ರಚಿತ
ಸಂ. | ಹಾಡು | ಹಾಡುಗಾರ(ರು) | ಸಮಯ |
---|---|---|---|
1. | "ಹ್ಯಾಪಿ ನಾಲು ಕಝುದ" | ಸಂತೋಷ್ ನಾರಾಯಣನ್ | 3:14 |
2. | "ಪೋಗಿರೇನ್" | ಕಲ್ಪನಾ ರಾಘವೇಂದರ್ | 3:46 |
3. | "ರಸಥಿ" | ಲಲಿತಾ ವಿಜಯ್ ಕುಮಾರ್ | 4:25 |
4. | "ಪ್ರೆಸಿಡೆಂಟ್" (Theme) | ವಾದ್ಯಗಳ ಸಂಗೀತ | 2:45 |
5. | "ಕನ್ನಡಿ" (Theme) | ವಾದ್ಯಗಳ ಸಂಗೀತ | 2:35 |
6. | "ವಿದಿಯಾಲ್ ತೇಡಿ" (Theme) | ವಾದ್ಯಗಳ ಸಂಗೀತ | 1:48 |
7. | "ಕನವುಗಲ್ ಸುಮಂಧು" (Theme) | ವಾದ್ಯಗಳ ಸಂಗೀತ | 1:23 |
8. | "ಕಣ್ಣೀರ್ ಮೋಝಿ" (Theme) | ವಾದ್ಯಗಳ ಸಂಗೀತ | 2:05 |
9. | "ಹ್ಯಾಪಿ ನಾಲು ಕಝುದ" (Karaoke) | ವಾದ್ಯಗಳ ಸಂಗೀತ | 3:16 |
10. | "ಪೋಗಿರೇನ್" (Karaoke) | ವಾದ್ಯಗಳ ಸಂಗೀತ | 3:47 |
11. | "ರಸಥಿ" (Karaoke) | ವಾದ್ಯಗಳ ಸಂಗೀತ | 4:28 |
ಒಟ್ಟು ಸಮಯ: | 33:32 |
ಚಿತ್ರದ ಉಪಗ್ರಹ ಹಕ್ಕುಗಳನ್ನು ಜಯಾ ಟಿವಿಗೆ ಮಾರಾಟ ಮಾಡಲಾಯಿತು.[೨೩] ಚಿತ್ರದ ಮೊದಲ ಪೋಸ್ಟರ್ ಅನ್ನು 8 ಮಾರ್ಚ್ 2015 ರಂದು ಬಿಡುಗಡೆ ಮಾಡಲಾಯಿತು. ಅದೇ ದಿನ, ತಯಾರಕರು ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಿದರು.[೨೪][೨೫] 2015ರ ಏಪ್ರಿಲ್ 6ರಂದು ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು.[೨೬] ಆರಂಭದಲ್ಲಿ 2015ರ ಏಪ್ರಿಲ್ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ 2015ರ ಏಪ್ರಿಲ್ 15ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. [ಸಾಕ್ಷ್ಯಾಧಾರ ಬೇಕಾಗಿದೆ]ಈ ಚಿತ್ರವನ್ನು ತೆಲುಗಿನಲ್ಲಿ 36 ವ್ಯಾಸು ಎಂದು ಡಬ್ ಮಾಡಲಾಯಿತು ಮತ್ತು 2020ರ ಜುಲೈ 24ರಂದು ಆಹಾದಲ್ಲಿ ಬಿಡುಗಡೆ ಮಾಡಲಾಯಿತು.[೨೭]
36 ವಯಾದಿನಿಲೆ ತಮಿಳುನಾಡಿನ ಗಲ್ಲಾಪೆಟ್ಟಿಗೆಯಿಂದ 2015ರ ಮೇ ತಿಂಗಳವರೆಗೆ ₹7 ಕೋಟಿ ಸಂಗ್ರಹಿಸಿದೆ.[೨೮] ಈ ಚಿತ್ರವು ಬಿಡುಗಡೆಯಾದ ಎರಡು ವಾರಗಳ ನಂತರ ವಾಣಿಜ್ಯಿಕವಾಗಿ ಯಶಸ್ವಿಯಾಯಿತು ಎಂದು ಘೋಷಿಸಲಾಯಿತು.[೨೯]
ವರ್ಷ. | ಪ್ರಶಸ್ತಿ ವರ್ಗ | ಕಲಾವಿದ/ನಾಮಿನಿ/ವಿಜೇತ | ಫಲಿತಾಂಶ |
---|---|---|---|
2015 | ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ವಿಮರ್ಶಕರ ಪ್ರಶಸ್ತಿ | ಜ್ಯೋತಿಕ | ಗೆಲುವು |
ಅತ್ಯುತ್ತಮ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ-ತಮಿಳು | ಜ್ಯೋತಿಕ | Nominated | |
ಅತ್ಯುತ್ತಮ ಚಲನಚಿತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ-ತಮಿಳು | ಸೂರ್ಯ (ನಿರ್ಮಾಣ ಸಂಸ್ಥೆ-2ಡಿ ಎಂಟರ್ಟೈನ್ಮೆಂಟ್) |
Nominated | |
ಅತ್ಯುತ್ತಮ ನಿರ್ದೇಶಕ ಫಿಲ್ಮ್ಫೇರ್ ಪ್ರಶಸ್ತಿ-ತಮಿಳು | ರೋಶನ್ ಆಂಡ್ರ್ಯೂಸ್ | Nominated | |
ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್ಫೇರ್ ಪ್ರಶಸ್ತಿ-ತಮಿಳು | ದೇವದರ್ಶಿನಿ | Nominated | |
ಅತ್ಯುತ್ತಮ ಗೀತರಚನೆಕಾರ ಫಿಲ್ಮ್ಫೇರ್ ಪ್ರಶಸ್ತಿ-ತಮಿಳು | ವಿವೇಕ್-"ವಾದಿ ರಸಾಥಿ" ಹಾಡು | Nominated | |
ಅತ್ಯುತ್ತಮ ನಟಿಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ | ಜ್ಯೋತಿಕ | ಗೆಲುವು | |
ಉತ್ತಮ ಬೆಳಕಿನಲ್ಲಿ ಮಹಿಳೆಯ ಪಾತ್ರವನ್ನು ತೋರಿಸಿದ ಅತ್ಯುತ್ತಮ ಚಲನಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ | ಸೂರ್ಯ ಜ್ಯೋತಿಕ |
ಗೆಲುವು | |
ಅತ್ಯುತ್ತಮ ಹಾಸ್ಯನಟನಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ | ದೇವದರ್ಶಿನಿ | ಗೆಲುವು | |
ಅತ್ಯುತ್ತಮ ಗೀತರಚನೆಕಾರರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ | ವಿವೇಕ್ | ಗೆಲುವು | |
ಅತ್ಯುತ್ತಮ ಮೇಕಪ್ ಕಲಾವಿದರಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ | ಸಬರಿ ಗಿರಿಶನ್ | ಗೆಲುವು | |
ಅತ್ಯುತ್ತಮ ಪುರುಷ ಡಬ್ಬಿಂಗ್ ಕಲಾವಿದನಿಗೆ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ | ಗೌತಮ್ ಕುಮಾರ್ | ಗೆಲುವು | |
ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ | ಕಲ್ಪನಾ ರಾಘವೇಂದ್ರ | ಗೆಲುವು | |
ಅತ್ಯುತ್ತಮ ನಟ-ಮಹಿಳೆಗಾಗಿ ಬಿಹೈಂಡ್ವುಡ್ಸ್ ಪೀಪಲ್ಸ್ ಚಾಯ್ಸ್ | ಜ್ಯೋತಿಕ | ಗೆಲುವು[೩೦] | |
ಬಿಹೈಂಡ್ವುಡ್ಸ್ ಅತ್ಯುತ್ತಮ ಚೊಚ್ಚಲ ಚಲನಚಿತ್ರ ನಿರ್ಮಾಪಕ | ಸೂರ್ಯ ಜ್ಯೋತಿಕ (ನಿರ್ಮಾಣ ಸಂಸ್ಥೆ-2ಡಿ ಎಂಟರ್ಟೈನ್ಮೆಂಟ್) |
ಗೆಲುವು[೩೦] |
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)